Submission 3088

ನಿಲ್ಲು ಮನಸೇ ಯಾಕೆ ಓಡುತಿರುವೆ

Submitted By: ದೀಪಕ ರ. ಕಾಸಾಯಿ

----------------------------------

ನಿಲ್ಲು ಮನಸೇ ಯಾಕೆ ಓಡುತಿರುವೆ ಕಾಲದ ಹಂಗಿಲ್ಲದೆ ಕಷ್ಟದ ಅರಿವಿಲ್ಲದೆ ಸಧಾ ಸಂತೋಷದ ಊಯ್ಯಾಲೆ ಆಡುತಿರುವೆ ನಿಲ್ಲು ಮನಸೇ ಯಾಕೆ ಓಡುತಿರುವೆ. ಪ್ರೀತಿ ವಾತ್ಸಲ್ಯದ ಅನುಭವದ ದಾರಿ ತೋರಿಸಿ ಹೃದಯದಲ್ಲಿ ದಯದ ಮನೆ ಮಾಡಿ ಮನದ ದನಿಗೆ ಕಿವಿಗೊಡದೆ ಕೀಳು ಆಶೆ ಲೋಭಗಳಿಗೆ ಹುಚ್ಚೆದ್ದು ಓಡುತಿರುವೆ ನಿಲ್ಲು ಮನಸೇ ಯಾಕೆ ಓಡುತಿರುವೆ. ಇನ್ನಾದರೂ ಬಿಡು ಚಂಚಲ ಓಟವಾ ಜ್ಞಾನದ ಅರಿವಿನಿಂದ ಅಜ್ಞಾನದ ಬಾಗಿಲ ಮುರಿದು ನಿನ್ನೊಳಗಿನ ಹೃದಯದ ದನಿಗೆ ಓಗೊಟ್ಟು ಮನದ ಭೀತಿಯ ಬದಿಗಿಟ್ಟು ಆತ್ಮವಿಶ್ವಾಸದಿಂದ ನಡೆ ಮುಂದೆ ಮನವೇ ನಿಲ್ಲು ಮನಸೇ ಯಾಕೆ ಓಡುತಿರುವೆ.

----------------------------------

Reg ID: BF25-5562

Please Note - You can vote only Once. If you have already voted - the voting will be disabled automatically by the system.

42
Votes
276
Views
11 Months
Since posted

VOTING Closed on Nov 30, 2025!

Scroll to Top