Submission 2862

ಕನ್ನಡ ಬಳಸಿ

Submitted By: Anand Yallappa Kondaguri.Hirebagewadi

----------------------------------

ವಿಶ್ವದ ಲಿಪಿಗಳ 'ರಾಣಿ' ನನ್ನ ಕನ್ನಡವ್ವ. ಎನೆಂದು ವರ್ಣಿಸಲಿ ನಿನ್ನ ನನ್ನವ್ವ! ನಿನಗಾದ ವಯಸ್ಸನು ಸರಿಯಾಗಿ ನಾವು ಬಲ್ಲೆವಾ? ಕನ್ನಡ ಅನ್ನೋ ಪದವೇ ಶತಶತಮಾನಗಳಷ್ಟು ಹಳೆದು. ಕನ್ನಡ ಸಾಲ್ಯಾಗ ಶಿಕ್ಷಕರ ಅದಾರ ಬರ್ಪುರ! ಮಕ್ಕಳೆಲ್ಲಿ ಅಂತ ನೋಡಿದ್ರ ಹೋಗಿ ಕುಂತಾರೆಲ್ಲಾ ಇಂಗ್ಲೀಷ ಮೀಡಿಯಂ ಕಲಿಯಾಕ! ಕನ್ನಡ ಸಾಲಿ ಅನ್ನೋದ 'ಬಾಗ್ಯಲಕ್ಷ್ಮಿ' ಬಾಂಡಗ ಅಷ್ಟೇ ಸೀಮಿತ ಆಗ್ಯಾವ! ಅಲ್ಲಿಗೊಬ್ರು ಇಲ್ಲಿಗೊಬ್ರು ನಾ ಕಲಿತ ಸಾಲಿ ನೀನು ಅಲ್ಲೆ ಕಲಿ ಅಂತಾರು! ಹೊತ್ತ ಹುಟ್ಟಿರ್ ಸಾಕ ಹಾಯ್ ಹಲೋ ಗುಡ್ ಮಾರ್ನಿಂಗ್! ಮಮ್ಮಿ ಟೀ ಕಾಫಿ ನಾಷ್ಟ ಟಿಫಿನ್! ನಡುನಡುವ ಪಾನಿಪುರಿ ಬೇಲ್ ಪುರಿ!(ಹಿಂದಿ ಹೇರಿಕೆ) ಯಾಕ್ ಹಿಂಗ್ ಅಂತ ನೋಡಿದ್ರಾ ಆಂಗ್ಲ ಆಗೈತಿ ಆಮ್ಲಜನಕ! ನೀವು ಉಳಿಸೊದು ಬೇಡ,ಬೆಳಸೊದು ಬೇಡ! ಬರೀ ನಿತ್ಯ ಬಳಸ್ರಿ ಸಾಕು ನಮ್ಮ ಕನ್ನಡವ!

----------------------------------

Reg ID: BF25-5465

Please Note - You can vote only Once. If you have already voted - the voting will be disabled automatically by the system.

322
Votes
2,292
Views
11 Months
Since posted

VOTING Closed on Nov 30, 2025!

Scroll to Top