ನಂಜಿನ ಉಸಿರುಗಳು
Submitted By: Namadev Kagadagar
----------------------------------
ಮನದ ತುಂಬಾ ನಂಜಿನ ಗಾಯದ ಗುರುತುಗಳು, ಹಚ್ಚಬೇಕಾಗಿದೆ ಸಮಾನತೆಯ ಮುಲಾಮು... *** ಜಗದೊಡಲದ ಬೇರುಗಳನ್ನು ತಿಂದು ಬದುಕುತ್ತಿದೆ ಅಶಾಂತಿ, ಚಿಗುರಿಸಬೇಕಾಗಿದೆ ಶಾಂತಿಯ ಕ್ರಾಂತಿ *** ಭೂಮಿ-ಆಕಾಶಗಳೇಕೆ ಇಷ್ಟೊಂದು ಅಳುತ್ತಿವೆ ಭೂಗರ್ಭ ಸೀಳಿದೆ, ಆಗಸದ ತುಂಬೆಲ್ಲಾ ತೂತುಗಳು ಕಾರಣ ನಾವು ಎಷ್ಟೊಂದು ಕ್ರೂರಿ ಅಲ್ವಾ.? *** ಕನಸುಗಳ ನೇಯ್ಗೆ, ನೋವಿನ ಬಣ್ಣ ಬಳಿದುಕೊಂಡು ಮಸುಕಾಗಿದೆ, ನೇಯ್ದ ನೇಯ್ಗೆಯ ಎಳೆಗಳು ನಂಜಿನಿಂದ ಕೂಡಿವೆ. *** ಜಾತಿ ನಂಜಿನ ನೇಯ್ಗೆಯಿಂದ ಆದ ಗಾಯ ಮತ್ತಷ್ಟು ಕೀವು ತುಂಬಿಕೊಳ್ಳುತ್ತಿದೆ, ನೋವು ಹೇಗೆ ಮಾಯಿಸುವುದು? ಇನ್ನೂ ಗಾಯದ ಕಲೆ ಮಾಯವಾಗುವುದೇ. *** ಮುಖವಾಡದೊಳಗಿನ ಕ್ರೂರಿ, ಚೂರಿ ಮಸಿಯುತ್ತಿರುವನು ಜಾತಿ ಧರ್ಮಗಳು ಉಸಿರುಗಟ್ಟಿಕೊಳ್ಳುತ್ತಿವೆ. ----------------------------------------
----------------------------------
Reg ID: BF25-5464
Please Note - You can vote only Once. If you have already voted - the voting will be disabled automatically by the system.