Submission 2858

ಬದಲಾಗುವ ಬಣ್ಣದ ಬದುಕು.

Submitted By: Sharanu M

----------------------------------

ಬರೆದು ಹೇಗೆ ಬಣ್ಣಿಸಲಿ,, ಬದಲಾಗುವ ಈ ಬಣ್ಣದ ಬದುಕನ್ನ. ಭಾವನೆಯ ಬಣ್ಣ ಬಳಿಯುವಷ್ಟರಲ್ಲಿ, ಬದುಕು ಬೇರೊಂದು ಬಣ್ಣ ಬಳಿದು ನಿಂತಿತ್ತು. ಹೇಗೆ ಬೆಳಗಿಸಲಿ ನನ್ನೊಲವಿನ ಹಣತೆಯನ್ನ? ಆ ಪ್ರೀತಿಯ ಹಣತೆಗೆ, ಬೇರೊಬ್ಬರು ತೈಲ ಎರದಿರಲು. ಯಾರ ದೂರಲಿ? ಎಲ್ಲಿ ಹುಡುಕಲಿ? ಪ್ರೀತಿಯ ರಾಗ ಚೆಲ್ಲಿ ಹಾರಿಹೋದಾ ಹಕ್ಕಿಯೊಂದನ್ನ. ಒಲವಿನ ಕನಸುಗಳನ್ನ ಅರಸಿ ಭ್ರಮಿಸಿರುವೆ, ಆ ಕನಸುಗಳು ತಿರುಕನ ಕನಸ್ಸೆಂದು ನಿಟ್ಟುಸಿರು ಬಿಟ್ಟಿರುವೆ.

----------------------------------

Reg ID: BF25-5463

Please Note - You can vote only Once. If you have already voted - the voting will be disabled automatically by the system.

45
Votes
265
Views
11 Months
Since posted

VOTING Closed on Nov 30, 2025!

Scroll to Top