ಬಾಲ್ಯ, ತಿಳಿಯಿತು ನಿನ್ನ ಮೌಲ್ಯ
Submitted By: Vishwas Nigadi
----------------------------------
ಕಾಯುತ್ತಿದ್ದೆ ನಾನು ಆ ಮಳೆಯು ಬಿದ್ದು, ಇಳೆಯು ತೋಯ್ದು, ಒದ್ದೆಯಾಗಿ ಗದ್ದೆಯ ಮೇಲಿನ ಮಣ್ಣು ಸುರಿಸುವ ಆ ಅಪರೂಪದ ಸುವಾಸನೆಗೆ. ಅದಕ್ಕಾಗಿ ಚಡಪಡಿಸುತ್ತಿದ್ದೆ ನಾ ಬೇಸಿಗೆಯ ಕೊನೆಗೆ, ಮಳೆರಾಯನ ಜೊತೆಗೆ. ಮಣ್ಣಿನಲ್ಲಿ ಬಿದ್ದು, ಹೊರಳಾಡಿ ಎದ್ದು, ಗೆಳೆಯರ ರೀತಿ ಪಲ್ಟಿ ಹೊಡೆಯಬೇಕೆಂಬ ಜಿದ್ದು. ನಮ್ಮದೆ ಅಂಗಡಿಯಲ್ಲಿನ ಚಿಲ್ಲರೆಯ ಕದ್ದು, ಒಯ್ಯುತ್ತಿದ್ದೆ ನಾನದನ್ನು ಮಾಡದೆಯೆ ಸದ್ದು. ಬಾಲ್ಯವು ಮನುಷ್ಯನ ಪಯಣದಲ್ಲಿನ ಜೀವನ ಜಾತ್ರೆ, ಕಲಿಯುವುದು ಕಡಿಮೆಯಾದರೂ ಅನುಭವಿಸಲು ಇರುವುದು ತಳವಿರದ ಪಾತ್ರೆ. ಇಲ್ಲಿಂದಲೇ ತಾನೇ ಉಗಮಿಸುವುದು ಎಲ್ಲರ ಜೀವನ ದಾರಿಯ ಯಾತ್ರೆ, ಬರೆದಿರುವೆನು ನನ್ನದೆರಡು ಬಾಲ್ಯದ ನೆನಪುಗಳನ್ನು ಈ ರಾತ್ರೆ.
----------------------------------
Reg ID: BF25-5426
Please Note - You can vote only Once. If you have already voted - the voting will be disabled automatically by the system.