ಆದರ್ಶ ಶಿಕ್ಷಕ
Submitted By: Sulakshana Laxmanrao
----------------------------------
ಮನದಿ ಮಾನಸ ಗೆಲ್ಲು ಶಿಕ್ಷಕನಾಗಿ ಜ್ಞಾನದಿ ಕೆದಕು ಒಳಗಿನ ಹಸಿವನು ಛಲದಿ ಮುನ್ನಡೆಸು ಗುರಿ ಮುಟ್ಟಲು ತೆರದಿ ಕಣ್ಣುಗಳನು ಸತ್ಯವನರಿಯಲು ದಾರಿದೀವಿಗೆಯಾಗು ಮುಗ್ಧ ಮನಸ್ಸಿಗೆ ಏಣಿಯಾಗು ನೀ ಕನಸು ನನಸಾಗಲು ಜರಡಿಯಾಗು ನೀ ಕಲ್ಮಶಗಳನ್ನು ಕಳೆಯಲು ಧೃತಿಗೆಡದೆ ಮುನ್ನುಗ್ಗಲು ಸಾರಥಿಯಾಗು ಜೀವನದಿ ಮೌಲ್ಯಗಳನ್ನು ಕಲಿಸಲು ಅಣಿಯಾಗು ಕಷ್ಟಗಳನ್ನು ನೀಗಿಸುವ ಪರಿಪಾಠವಾಗು ಎಲ್ಲದರಲ್ಲಿ ಆಸಕ್ತಿಯ ತೋರುವ ಚಿಲುಮೆಯಾಗು ಚಿಂತನಾತ್ಮಕ ಭಾವನೆಯ ಚೇತನವಾಗು ಬರಿ ಕಣ್ಣಿಗೆ ಕಾಣದ ಜ್ಞಾನಕ್ಕೆ ಸೂಕ್ಮದರ್ಶಕವಾಗು ಸಾಧನೆಯ ದಾರಿ ತೋರಲು ಮಾರ್ಗದರ್ಶಕನಾಗು ಎಲ್ಲರ ಮನದಲ್ಲಿ ಆದರ್ಶ ಶಿಕ್ಷಕನಾಗು.
----------------------------------
Reg ID: BF25-5416
Please Note - You can vote only Once. If you have already voted - the voting will be disabled automatically by the system.