Submission 2717

"ಬೇಸಗೆ ಕಾಲ"

Submitted By: ಯಶೋಧ

----------------------------------

ಬಯಲುಸೀಮೆಯ ಖಾಲಿ ಕರಿಯ ಹೊಲ, ಹೊಲದಲ್ಲೊಂದು ಬಿಳಿ ಸುಣ್ಣ ಬಳಿದ ಬಿದಿರಿನ ತಟ್ಟೆಯ ತಗಡಿನ ಮನೆ, ಮಠ ಮಠ ಮಧ್ಯಾಹ್ನ,ಬಣ ಬಣವೆನ್ನುವ ಮನ-ಮನೆ ಮನೆಯಲ್ಲಿ ರಾಯನಿಲ್ಲ, ಜಗುಲಿ ಖಾಲಿ-ಖಾಲಿ... ಮನೆಯ ಎತ್ತರಕ್ಕೂ ಮೀರಿಬೆಳೆದ ಮರ, ಅದೇಲ್ಲಿಂದಲೋ ತೂರಿ ಬರುವ ತಂಗಾಳಿ, ಆಗಾಗ ಬಿಸಿಲಿನ ತಾಪದ ಜೊತೆಸೇರಿ ಬೀಸುವ ಬಿಸಿಗಾಳಿ, ಗಾಳಿಗೆ ಸೋತು ಶರಣು ವಾಯುದೇವ ಎನ್ನುವಂತೆ ತಲೆದೂಗುವ ಗಿಡ-ಮರ... ಮರದಡಿಯಲ್ಲಿ ಬೇಸಿಗೆಯ ಬಿಸಿಲ ಬಿಸಿಗೆ ಬಳಲಿ ಜೊಲ್ಲು ಸುರಿಸುತ್ತ, ಹಲ್ಲು ಗಿಜುಗುತ್ತಿರುವ ದನಕರು, ದನದ ಕುಡಿತೆಯ ಸುತ್ತ ಬಿದ್ದಿರುವ ಅನ್ನದಗಳನ್ನ ಕುಕ್ಕಿ ತಿನ್ನುತ್ತಿರುವ ಕರಿಯ ಕಾಗೆ... ಅದೊಂದು ಸುಧೀರ್ಘವೆನ್ನಿಸುವ ಬೇಸಗೆಕಾಲ....

----------------------------------

Reg ID: BF25-5404

Please Note - You can vote only Once. If you have already voted - the voting will be disabled automatically by the system.

82
Votes
394
Views
11 Months
Since posted

VOTING Closed on Nov 30, 2025!

Scroll to Top