Submission 2615

ರೈತನ ಕಣ್ಣೀರು

Submitted By: ಶಿವರಾಜ್ ದಿನ್ನಿ ಪೋತ್ನಾಳ್ ರಾಯಚೂರು

----------------------------------

ಭತ್ತದ ಸಮೃದ್ಧ ಬೆಳೆಗಳು ಕೈ ಸೇರುವ ಹೊತ್ತಿಗೆ ಸುಗ್ಗಿಯ ಹಿಗ್ಗಿನಿಂದ ರಾಶಿಗಳನ್ನ ಮಾಡಬೇಕು ಎನ್ನುವ ಮನಸ್ಸಿಗೆ ಅಕಾಲಿಕ ಮಳೆರಾಯ ಮಣ್ಣು ಹಾಕಿದ ರೈತರ ಗೇಣು ಹೊಟ್ಟೆಗೆ! // ಮಳೆಯ ಹನಿಗಳ ನಡುವೆ ಬೆವರ ಹನಿಗಳು ಮಾಯವಾದವು! ತೆನೆಹೊತ್ತು ನಿಂತ ಪೈರು ನೀರುಪಾಲಾದವು ! ಮುಂದೆ ಬದುಕು ಹೇಗೆ ಕಟ್ಟಿಕೊಳ್ಳಬೇಕು ಎಂಬುದು ರೈತರ ಮನಸುಗಳು ಮನದಲ್ಲಿ ಮರುಗುತ್ತಿದ್ದವು !// ಒಮ್ಮೊಮ್ಮೆ ಸುಮ್ಮನೆ ರೈತರಾಗಬಾರದು ಎನ್ನುವ ಮನಸು, ಕೃಷಿಯ ಬಿಟ್ಟು ಏನು ಗೊತ್ತಿರದ ಬದುಕು! ಭೂತಾಯಿಯ ಸೇವೆ ಮಾಡಲು ನಿಂತರೆ, ಪ್ರಕೃತಿ-ವಿಕೋಪದಂತ ಬೆಳೆ ಬರುವ ಸಮಯದಲ್ಲಿ ಮಳೆರಾಯನ ಮುನಿಸು' ಸರಿದರೆ ಸರಿದು ಬಿಡು ಜೀವನ ಸಾಗಿಸುವೆವು ವರುಣದೇವ ನೀ ಮಾಡು ಮನಸ್ಸು! // ಆಫೀಸುಗಳಲ್ಲಿ ಕುಳಿತು ಮಾತನಾಡುವ ಕೆಲ ಅಧಿಕಾರಿಗಳಿಗೆ ಏನು ಗೊತ್ತು? ರೈತರಿಗೆ ಬಂದು ಒದಗಿರುವ ವಿಪತ್ತು! ಹಗಲು -ರಾತ್ರಿ ಎನ್ನದೆ ಶ್ರಮಿಸಿದ ರೈತರ ಜೀವಕ್ಕೆ ಬಂತು ಕುತ್ತು! ಆದ ನಷ್ಟಗಳನ್ನ ಒಮ್ಮೆ ಪರಿಶೀಲಿಸಿ ಪರಿಹಾರಗಳ ಮೂಲಕ ಕೈ ಹಿಡಿದು ಕಣ್ಣೀರು ಒರೆಸಿದರೆ ರೈತರಿಗೆ ಆದಿತು ಒಂದಿಷ್ಟು ಒಳಿತು, //

----------------------------------

Reg ID: BF25-5354

Please Note - You can vote only Once. If you have already voted - the voting will be disabled automatically by the system.

47
Votes
337
Views
11 Months
Since posted

VOTING Closed on Nov 30, 2025!

Scroll to Top