Submission 2546

ಸೌಂದರ್ಯ

Submitted By: Geeta B Berad

----------------------------------

ಸೌಂದರ್ಯವೆಂದರೆ ನೋಡುವ ನೋಟವಲ್ಲ, ವ್ಯಕ್ತಿಯ ವ್ಯಕ್ತಿತ್ವದ ವಿಕಸನವಲ್ಲವೆ? ಶಾಂತ ನಿಲುವಿನ ನಿಷ್ಕಲ್ಮಶ ನಗುವದು ಹೊಳೆವ ಕಣ್ಣಿನ ಮಿಂಚು ಎದೆಬಡಿತವಲ್ಲವೆ.. ತಂಗಾಳಿ ತಂಬೆಲರಿನ ನಡುವಿನ ನಂಟು ಹೃದಯಾರವಿಂದದಲಿ ಹರಡುವ ಬಿಂದು, ಮೃದು ಮನಸನು ಮುಟ್ಟಿ ನಗುವ ಸಿಂಧು ನಶಿಸುವ ರೂಪ ಲಾವಣ್ಯವ ಕೊಲ್ಲುವ ಬೆಳಕು.. ಮಾತಿನ ಮಹತ್ವವೋ ಮನದ ಸೌಮ್ಯತೆಯೊ ನಿಜದ ನೆೈಜತೆಯೊ ಪ್ರೀತಿ ಸಾಫಲ್ಯವೊ, ಗುಣದ ಗಾನವದು ಗಮ್ಯದಲಿ ಗಮನ ಸೆಳೆವುದು ಮರಭೂಮಿಯ ಓಯಾಸಿಸ್ಸದು ಕಣ್ಮನಕೆ ಆನಂದ ತರುವುದು.

----------------------------------

Reg ID: BF25-5320

Please Note - You can vote only Once. If you have already voted - the voting will be disabled automatically by the system.

21
Votes
408
Views
11 Months
Since posted

VOTING Closed on Nov 30, 2025!

Scroll to Top