ಕರುನಾಡ ವೈಭವ
Submitted By: malleshi
----------------------------------
ಕಪ್ಪು ಮಣ್ಣಿನ ನಮ್ಮ ಕರುನಾಡು ಸಮೃದ್ಧಿ ಸಂಪತ್ ಭರಿತ ನಾಡು ಕೃಷ್ಣ, ತುಂಗೆ, ಭದ್ರೆ, ಕಾವೇರಿಯ ನಾಡು ಅಚ್ಚ ಹಸಿರಿನ ಪಶ್ಚಿಮ ಘಟ್ಟಗಳ ನಾಡು ಪರಶುರಾಮನ ತಾಯಿ ನೆಲೆಸಿದ ನಾಡು ದಾಸರು, ಸಂತರು, ಶರಣರು ಜನಿಸಿದ ನಾಡು ಕದಂಬ, ರಾಷ್ಟ್ರಕೂಟ ಅರಸರ ಹೆಮ್ಮೆಯ ನಾಡು ಚಾಲುಕ್ಯ, ಹೊಯ್ಸಳ ಅರಸರ ಶಿಲ್ಪ ಕಲೆಗಳ ನಾಡು ಮುತ್ತು ರತ್ನಗಳನ್ನ ಬೀದಿಗಳಲ್ಲಿ ತೂಗಿದ ನಾಡು ದಕ್ಷಿಣಧಿಪತಿ ""ಪುಲಕೇಶಿಯು ಮೆರೆದಾಡಿದ ನಾಡು ಚೆನ್ನಮ್ಮ, ರಾಯಣ್ಣ, ಮದಕರಿ, ವೀರರು ಆಳಿದ ನಾಡು ಎಂಟು ಜ್ಞಾನಪೀಠ ತಂದ ಮಹನಿಯರ ನಾಡು ಯಕ್ಷಗಾನ, ಜಾನಪದ, ಸಂಸ್ಕೃತಿ ಕಲೆಗಳ ನಾಡು ಸಸ್ಯ ಸಂಕುಲ, ವನ್ಯ ಜೀವಿಗಳ ನೆಲೆ ನಾಡು ಕೋಲಾರ, ಹಟ್ಟಿಗಣಿಯಂತಹ ಚಿನ್ನದ ನಾಡು ಗೋಡಂಬಿ ಆಕಾರದಂತಿರುವ ನಮ್ಮ ಕನ್ನಡ ನಾಡು
----------------------------------
Reg ID: BF25-5313
Please Note - You can vote only Once. If you have already voted - the voting will be disabled automatically by the system.