Submission 2474

ನಿಲುಕದ ನಕ್ಷತ್ರ

Submitted By: Shilpa s revannavar

----------------------------------

ನನ್ನ ಕವನದಲ್ಲಿ ನಕ್ಷತ್ರನೆ ಚಂದಿರ ಈಗ ಅರಿವಾಯಿತು ಮನಕೆ ಈ ನಕ್ಷತ್ರ ಇಲ್ಲದ ಭೂಮಿ ಬರೀ ಮಬ್ಬು ನನ್ನ ಭಾವನೆಯ ಅನಿಸಿಕೆ ಪದಗಳು ಹೊರಡುತಿದೆ ನಿನ್ನ ಪ್ರೇರಣೆಯಿಂದ ಆ ನೀಲಿ ಬಾನಿನ ಜೋಕಾಲಿಯಲ್ಲಿ ಈ ನನ್ನ ಕವಿತೆಯ ಉಯ್ಯಾಲೆ ತೂಗುವ ಬೆಳ್ಳುಗಿಲು ಕದಡಿದ ಬಾನಿನ ಕಲರವದ ನರ್ತನ ಸೂಸುತಿದೆ ಬಾನಂದಿಗಳ ಕಲರವದ ಸಿಂಚನ ಮನಸ್ಸಿನಂಗಳದ ಮಾತಿಗೆ ಹೊರಡುವ ಮನದ ಪಿಸುನೆನಪಿನ ಸವಿ ಹೊರಡುತಿದೆ ನಿಸರ್ಗದ ನಕ್ಷತ್ರ ಪುಂಜಗಳ ಹೂ ಮಳೆ ನಿಲುಕದ ನಕ್ಷತ್ರದ ಮಧುರವಾದ ಹೊಂಬಾಳೆ ನಿಲುಕದ ನಕ್ಷತ್ರದೊಳಗೆ ಚುಕ್ಕಿಯ ಚೈತ್ರದ ಚಿತ್ತಾರದ ಪುಂಜ ಒಲವ ನಕ್ಷತ್ರಗಳನ್ನೆಲ್ಲ ಭೂಮಿಗೆ ತಂದು ಪೋಣಿಸಿದ ಮುತ್ತಿನಹಾರ.

----------------------------------

Reg ID: BF25-5284

Please Note - You can vote only Once. If you have already voted - the voting will be disabled automatically by the system.

119
Votes
786
Views
1 Year
Since posted

VOTING Closed on Nov 30, 2025!

Scroll to Top