ಕ್ಷಮಿಸು ಜೀವನವೇ
Submitted By: Sharanabasappa C B
----------------------------------
ನಿನ್ನ ಪ್ರತಿಕ್ಷಣದ ತಿರುವಿನಲಿ, ಕ್ಷಣ ಕ್ಷಣದ ಆತಂಕದ ಸುಳಿಯಲಿ ಅನುಕ್ಷಣದ ನಿರಾಶೆ ಭರವಸೆಗಳಲ್ಲಿಯೇ ಎತ್ತಲೋ ತಿರುಗಿಸಿ,ಆಡಿಸಿ,ಓಡಿಸಿ,ದಣಿಸಿ , ದಾರಿ ಕಾಣದಾಗಿಸಿದೆ ನಿನ್ನ ಆಳ ಅರಿಯದೆ,ಅಗಲ ತಿಳಿಯದೆ, ನಿನ್ನ ಎತ್ತರವನ್ನರಿಯದೆ,ನಿಜರೂಪವ ಕಾಣದೆ ಅತ್ತಿಂದತ್ತ ಇತ್ತಿಂದತ್ತ ದಾರಿ ತೋರಿಹರೆಂದು ಅವರಿವರ ಕೈ ಹಿಡಿದೆ ಅವರೊಂದಿಗೆ ನಡೆದೆ, ಕ್ಷಮಿಸು ಜೀವನವೇ , ನಿನ್ನ ಆರಾಧಿಸುವೆ,ಇನ್ನಾದರೂ ಬದುಕಿನ ಪ್ರತಿಕ್ಷಣ ನಿನ್ನ ಸೌಂದರ್ಯ ಸೊಬಗ ಸವಿಯವೆ ಅನುಕ್ಷಣ ನನ್ನ ಅರಿವಿನೊಂದಿಗೆ ನಿನ್ನ ಅರಿತ ಕ್ಷಣವೇ ನೀ ಬೆಳಕಾಗುವೆ ಆ ಬೆಳಕಲಿ ಕ್ಷಣ ಕ್ಷಣವೂ ನನ್ನಷ್ಟಕ್ಕೆ ನಾನೇ ನಡೆಯುವೆ
----------------------------------
Reg ID: BF25-5274
Please Note - You can vote only Once. If you have already voted - the voting will be disabled automatically by the system.