ನನ್ನವ್ವ
Submitted By: ಗುಡ್ಡಪ್ಪ.ಎನ್.ಚಟ್ರಮ್ಮನವರ
----------------------------------
ಗರ್ಭಗುಡಿಯಲ್ಲಿ ಹೊತ್ತು ಕಂಡ ದೇವರಲ್ಲಿ ಬೇಡುತ್ತ ನನಗೆ ಜನ್ಮ ನೀಡುವುದಕ್ಕೆ ತನ್ನ ಪ್ರಾಣ ಒತ್ತೆ ಇಟ್ಟವಳು ನನ್ನ ಬಗಲಲ್ಲಿ ಎತ್ತಿಕೊಂಡು ಕಲ್ಲು ಮುಳ್ಳು ತುಳಿದು ರಕ್ತಗಾಲಲ್ಲಿ ಎದೆಹಾಲಿತ್ತು ತಲೆಎತ್ತಿಸಿ ನಡೆಸಿದವಳು ಬಿಸಿಲಲ್ಲಿ ನಿಂತುಕೊಂಡು ತನ್ನ ತಾನು ಸುಟ್ಟುಕೊಳ್ಳುತ್ತ ತನ್ನ ನಿಂತ ನೆರಳಲ್ಲಿ ನನ್ನ ಕೊರಳು ಕಾಯ್ದವಳು ತಾನು ಹರಕು ಸೀರೆಯುಟ್ಟು ಕಣ್ಣೀರು ಕೂಳು ತಿನ್ನುತ್ತ ನನ್ನ ಕುದುರೆ ಮೇಲೆ ಮೆರೆಸಿದವಳು
----------------------------------
Reg ID: BF25-5259
Please Note - You can vote only Once. If you have already voted - the voting will be disabled automatically by the system.