ಅವಳದ್ದೇನೂ ತಪ್ಪಿಲ್ಲ
Submitted By: Vitthal pujeri
----------------------------------
ನೀನೇ ಅಲ್ವಾ ಆಕೆಯ ಬೆನ್ನು ಬಿದ್ದಿದ್ದು ನೀನೇ ಅಲ್ವಾ ಆಕೆಯನ್ನ ಕಾಡಿ, ಬೇಡಿ ಪ್ರೀತಿಸಿದ್ದು ನೀನೇ ಅಲ್ವಾ ಆಕೆಗೆ ಪ್ರಾಣ, ಜೀವನ ಎಂದಿದ್ದು, ಪಾಪ ಅವಳದ್ದೇನೂ ತಪ್ಪಿಲ್ಲ ನಿನ್ನ ಕಾಟ ತಡಿಯಲಾರದೆ ಒಪ್ಪಿಕೊಂಡಳಷ್ಟೇ ನೀನೇ ಅಲ್ವಾ ಆಕೆಗೆ ಚಿನ್ನ, ಬಂಗಾರ ಎಂದಿದ್ದು ನೀನೇ ಅಲ್ವಾ ಆಕೆಯನ್ನ ತಂದೆ ತಾಯಿಗೆ ಹೋಲಿಸಿದ್ದು ನೀನೇ ಅಲ್ವಾ ಅವಳನ್ನ ಸರ್ವಸ್ವ ಎಂದಿದ್ದು ಪಾಪ ಅವಳದ್ದೇನೂ ತಪ್ಪಿಲ್ಲ ಕರೆದಾಗಲೆಲ್ಲಾ ನಿನ್ನೊಂದಿಗೆ ಬಂದು ಮಾಯಗಾತಿಯಂತೆ ಮನಸೋತಳಷ್ಟೇ, ನೀನೇ ಅಲ್ವಾ ಪ್ರೀತಿ ಅಂತ್ಹೇಳಿ ಮದ್ವೆ ವಿಷ್ಯ ಎತ್ತಿದ್ದು ನೀನೇ ಅಲ್ವಾ ಇಷ್ಟಾ ಇಲ್ದಿದ್ರು ಅವಳಿಷ್ಟದಂತೆ ನಟಿಸಿದ್ದು ನೀನೇ ಅಲ್ವಾ ಆಕೆಯ ಕೊರಳಿಗೆ ತಾಳಿ ಬಿಳ್ಳೋ ಕ್ಷಣದಲ್ಲೂ ಸುಮ್ಮನಿದ್ದದ್ದು, ಪಾಪ ಅವಳದ್ದೇನೂ ತಪ್ಪಿಲ್ಲ ಅವಳ ತಂದೆ ತಾಯಿಯ ಇಷ್ಟದಂತೆ ಬೇರೊಬ್ಬನ ತೋಳಿಗೆ ಬಂದಿಯಾದಳಷ್ಟೆ. ಇವಾಗಾದ್ರು ಹೇಳು ಅವಳದ್ದೇನು ತಪ್ಪಿಲ್ಲಾಂತ.....
----------------------------------
Reg ID: BF25-5245
Please Note - You can vote only Once. If you have already voted - the voting will be disabled automatically by the system.