Submission 2235

ಹಿಡಿದುಕೋ ಪುಟ್ಟ ಕಂದನ ಚಿಗುರು ಬೆರಳುಗಳ

Submitted By: Sukanya kalasa

----------------------------------

ಹಿಡಿದುಕೋ ಪುಟ್ಟ ಕಂದನ ಚಿಗುರು ಬೆರಳುಗಳ ನಿನ್ನೆದೆಯಲ್ಲಿ ತುಸುವಾದರೂ ಮಾರ್ದವತೆ ಉಳಿದಿದ್ದಲ್ಲಿ ಇಳಿವುದಲ್ಲಿ ಕನಸುಗಳಮುತ್ತುಮಳೆ ! ಹಿಡಿದುಕೋ ಪುಟ್ಟ ಕಂದನ ಕಿರುಬೆರಳುಗಳ ನಿನ್ನೆದೆಯಲ್ಲಿ ತುಸುವಾದರೂ ಬಿಸುಪು ಇದ್ದಲ್ಲಿ ಪ್ರವಹಿಸುವುದಲ್ಲಿ ಮೌನ ಮಾತಾಗುವ ಸಹಜರಾಗ ರಂಗಿನುಲಿ! ಹಿಡಿದುಕೋ ಪುಟ್ಟ ಕಂದನ ಕಿರುಬೆರಳುಗಳ ನಿನ್ನೆದೆಯಲ್ಲಿ ತುಸುವಾದರೂ ಮಾನವತೆ ಇದ್ದಲ್ಲಿ ಮೂಡುವುದಲ್ಲಿ ನೋವುಂಡ ಜೀವಗಳ ಬಾಳು ಬೆಳಗುವ ಭರವಸೆಯ ಕಿರುಬೆಳಕ ಸೆಳಕು! ಹಿಡಿದುಕೋ ಪುಟ್ಟ ಕಂದನ ಕಿರುಬೆರಳುಗಳ ನಿನ್ನೆದೆಯಲ್ಲಿ ತುಸುವಾದರೂ ಆರ್ದ್ರತೆ ಇದ್ದಲ್ಲಿ ಒಸರುವುದು ಜೀವಸೆಲೆ ನಂದಿಸುತ ದ್ವೇಷದುರಿ!!

----------------------------------

Reg ID: BF25-5214

Please Note - You can vote only Once. If you have already voted - the voting will be disabled automatically by the system.

153
Votes
794
Views
11 Months
Since posted

VOTING Closed on Nov 30, 2025!

Scroll to Top