ಪ್ರಕೃತಿ ಸೊಬಗು
Submitted By: Renuka Sangappanavar
----------------------------------
ರವಿಯು ಬಾನಲಿ ನಗುತ ಬೆಳಕನು ಬುವಿಗೆ ಚೆಲ್ಲಿದ ಹರುಷದಿ ಕವಿಯು ಕಣ್ಣನು ತುಂಬಿ ಕೊಳ್ಳುತ ಬರೆದ ಕವಿತೆಯ ಹಸ್ತದಿ ಬನದ ಸುಂದರ ಹೂವ ಸೊಬಗಿದು ದೈವ ಮಹಿಮೆಯ ಮಾಯೆಯು ಮನವ ಕ್ಷಣದಲಿ ಕಟ್ಟಿ ಹಾಕಿತು ಕಿರಣ ಚಾಚಿದ ಮೋಡಿಯು ಬಣ್ಣ ಬಳಿದನು ಗಗನದುದ್ದಕು ಸೂರ್ಯ ಫಳಫಳ ಹೊಳೆಯುತ ಕಣ್ಣ ಮಿಟುಕಿಸಿ ನಾನು ನೋಡಿದೆ ಸೃಷ್ಠಿಗೆ ತಲೆಯ ಬಾಗುತ ನೀರ ಮೇಲ್ಗಡೆ ಅಲೆಯ ನರ್ತನ ನಾಚುವಂತಿದೆ ಗಿಡಮರ ನಾರಿ ಮಣಿಯರ ಬೆರಗು ಗೊಳಿಸಿದ ಹೊನ್ನ ರಂಗಿನ ಭಾಸ್ಕರ ನಾಶ ಮಾಡಲು ತೊಡಗಬೇಡವೊ ಮುಂದೆ ಕಾದಿದೆ ನರಕವು ವೇಷ ಬದಲಿಸಿ ಮೆರೆಯದಿರು ನೀ ಇದುವೆ ಹಸಿರಿನ ತಾಣವು
----------------------------------
Reg ID: BF25-5200
Please Note - You can vote only Once. If you have already voted - the voting will be disabled automatically by the system.