Submission 2097

ಬಾಲ ಪಯಣದ ದಾರಿ

Submitted By: ಅಶೋಕ. ಪ್ರ ದೇಸಾಯಿ

----------------------------------

ಬಾಳ ಪಯಣದ ದಾರಿ ತಿರುವುಗಳು ಗುಟ್ಚಿನ ಬೆನ್ನೇರಿ! ಮುಂದೆ ನಡೆದಂತೆ, ಹಾದಿ ದೂರಾಗುತಿದೆ ಸೇರಿ, ದಿಗಂತವ ಸೇರಿ, ಸಾಗಿದೆ ನಡೆ, ದಾಟುತ ಅಡೆತಡೆ!, ದೂರದ ದುರ್ಗಮ!,ಆಗುವುದು ಸುಗಮ. ಸತ್ಯದ ಹೆಜ್ಜೆಗಳಿರುವಾಗ. (ಅ. ಪ) ಮನದ ನೋವು ಭಾವ ನಾವೆಯ ಪಯಣಿಗ. ಹುದುಗಿಟ್ಟ ದುಮ್ಮಾನ, ಬಂಧುರ ಹಂದರದ ಮದುಮಗ. ಅಪಮಾನಗಳ ಕುಲುಮೆಯಿಲ್ಲಿ ಆಗು ಸಾಧನೆಯ ಚೆನ್ನಿಗ. 1 ಬಾಳ ಪಯಣದ ದಾರಿ ತಿರುವುಗಳು ಬೆನ್ನೇರಿ. ಇರುವ ಮೂರು ದಿನ ಗೆಲ್ಲುತ ಜನಮನ ಜಿಹ್ವೆಯಲ್ಲಿರಲಿ ವಾಸ, ಸಾಗುವ ಮೊದಲು ಕೊನೆಯ ಪ್ರವಾಸ. ಮರೆವಿನ ಮರೆಯಲಿ ಮರೆತಾದರೂ ಹೃದಯದ ಹುತ್ತಲ್ಲಿ ನೆಲೆಯಾಗಿರು!. 2

----------------------------------

Reg ID: BF25-5167

Please Note - You can vote only Once. If you have already voted - the voting will be disabled automatically by the system.

7
Votes
160
Views
1 Year
Since posted

VOTING Closed on Nov 30, 2025!

Scroll to Top