Submission 2083

ಆ ಖಾಲಿತನ

Submitted By: ಮಾಲಾ.ಮ.ಅಕ್ಕಿಶೆಟ್ಟಿ.

----------------------------------

ಆ ಖಾಲಿತನ ಎಷ್ಟು ಸೊಬಗು!!! ಒಂದು ದೀಪ ಮತ್ತೊಂದರ ಜೊತೆ ನಕ್ಕು ಇಳಿಬಿಟ್ಟ ಹೂ ಮಾಲೆಗಳು ಮಾತಾಡಿ, ಜಳಕ, ಹೊಸ ಬಟ್ಟೆ ಅಡುಗೆ, ಪೂಜೆ,ಹೆಂಗಳೆಯರು ಆರತಿಗೆ ಬಂದು ನರಕ ಚತುರ್ದಶಿ, ಅಮಾವಾಸ್ಯೆ ಪಾಡ್ಯ,ಬಾಹುಬೀಜ ಸಂಭ್ರಮ ತಯಾರಿ, ತಿಂಗಳುಗಂಟಲೆ ಆಗಮಿಸುವ ದೂರದ ಒಡಹುಟ್ಟಿದವರು, ಸಂಬಂಧಿಕರು,ಮತ್ತೆ ಮರಳಲು ಸಿಹಿ ಭೋಜನ ಸವಿ, ಕಲರವದ ಮಕ್ಕಳು ಅಚ್ಚರಿಯೊಂದಿಗೆ ಅನುಭವಿಸುವ ಸಂಸ್ಕೃತಿಯ ಪಾಠಗಳು, ತಮ್ಮ ಮಕ್ಕಳಿಗೂ ಮುಂದುವರೆಸಲು ದೀಪಗಳು ಮತ್ತೆ ಅಟ್ಟ ಹತ್ತಿ, ಹೂವುಗಳು ಬಾಡಿ, ಹಕ್ಕಿಗಳು ತಮ್ಮ ತಮ್ಮ ಗೂಡು ಸೇರಿ, ಮರಿಗಳೊಂದಿಗೆ ಮರು ವರ್ಷ ಕಾಯಲು ಮೂಕವಾದ ದೀಪಗಳ ಉದುರಿದ ಹೂ‌ಪಕಳೆಗಳ ಕೊನೆಯಾದ ಸಡಗರದ ಸ್ವಗತ ಹಾಡಿ, ನೀಲಿ ಆಕಾಶವೂ ಕೇಳಿ, ತಿಂಗಳ ತಯಾರಿ ಖಾಲಿ ಮೂರು ದಿನಗಳಲ್ಲಿ, ಅರ್ಥವಾದೀತೇ? ಆ ಖಾಲಿತನ ಆ ಬೇಸರ

----------------------------------

Reg ID: BF25-5166

Please Note - You can vote only Once. If you have already voted - the voting will be disabled automatically by the system.

0
Votes
108
Views
1 Year
Since posted

VOTING Closed on Nov 30, 2025!

Scroll to Top