Submission 1947

ಮರೆಯಾಗುವ ಮೊದಲು

Submitted By: SANJU

----------------------------------

ನಿನ್ನ ಮೊದಲ ಹೆಜ್ಜೆ ನನ್ನ ಮಡಿಲಲ್ಲಿ ಇಳಿದಿತು, ನಿನ್ನ ನಗು ನನ್ನ ಹಸಿರಿನೊಳಗೆ ಹರಡಿತು. ನನ್ನ ಎದೆಯಲ್ಲಿ ಮಳೆ ತುಂತುರು ಕರೆದಿತು, ನನ್ನ ಕೈಯಲ್ಲಿ ಹೊಳೆ ತಣ್ಣಗೆ ಹರಿದಿತು. ನೀನು ಬಿತ್ತಿದ ಬೀಜವು ಬೆಳೆದು ಆಹಾರವಾಯಿತು, ನಾನಿತ್ತೆ ಪ್ರಾಣಿಗೆ ಸಮವಾದ ಬಾಳಾಯಿತು. ಇಂದೆ ನಿನ್ನ ಶಬ್ದವು ಗರ್ಜನೆಯಾಗುತ್ತಿದೆ, ಮರಗಳ ಮಾತು ಮೌನವಾಗಿ ನಿಂತಿದೆ. ಪರ್ವತದ ಎದೆಗೆ ಬಿರುಕು ಬಿದ್ದಿದೆ, ಮೇಘದ ಹಾರಾಟ ಕಣ್ಣೀರಿಗೆ ತಾಗಿದೆ. ನನ್ನ ಮೈಮೇಲೆ ಬೆಂಕಿಯ ಚಿತ್ರ ಉರಿಯುತ್ತಿದೆ, ಬಿಸಿಲಲ್ಲಿ ಹಸಿರು ಮರಳಾಗಿ ಬಾಡುತ್ತಿದೆ. ಆದರೂ ತಿನ್ನದ ತಾಯಿ ತಾಳ್ಮೆಯಿಂದ ಕಾದಿದೆ, ಒಂದು ಮರ ನೆಟ್ಟು ಕ್ಷಮೆ ಕೇಳು ಹೃದಯದಿಂದ. ಮರೆಯಾಗುವ ಮೊದಲು ನಿನ್ನ ಪ್ರೀತಿಗೆ ಗ್ರಂಥವಾಗಿದ್ದೇನೆ.

----------------------------------

Reg ID: BF25-5139

Please Note - You can vote only Once. If you have already voted - the voting will be disabled automatically by the system.

11
Votes
199
Views
1 Year
Since posted

VOTING Closed on Nov 30, 2025!

Scroll to Top