ಶೀರ್ಷಿಕೆ ಇಲ್ಲದ ಕವಿತೆ
Submitted By: ಆದಿತ್ಯ ಎಸ್ ಎನ್
----------------------------------
ಶೀರ್ಷಿಕೆ ಇಲ್ಲದೇ ಇರುವ ಕವಿತೆ ನೀನು ಅದನ್ನು ರಚಿಸಲು ಇಚ್ಛಿಸಿರುವ ಕವಿ ನಾನು. ಪ್ರತಿ ಸಾಲಿನಲ್ಲೂ ನಿನ್ನ ನಗು ಓದುತ್ತಾ ಪ್ರತಿ ವಿರಾಮದಲ್ಲಿ ನಿನ್ನ ನಿಶ್ವಾಸ ಕೇಳುತ್ತಾ. ಅರ್ಥವಿಲ್ಲದ ಪದಗಳಲ್ಲಿ ನಿನ್ನ ನೆನೆಸುತ್ತ ಮೌನದ ನುಡಿಗಳಲ್ಲಿ ನಿನ್ನ ಸ್ಪರ್ಶ ಹುಡುಕುತ್ತಾ. ನಿನ್ನ ನೋಟವೇ ನನ್ನ ಸಾಲುಗಳ ಪ್ರೇರಣೆಯಾದರೆ ನಿನ್ನ ಮೌನವು ನನ್ನ ಕವನದ ತಾಳವಾಗಿ ಬಿಡುತ್ತದೆ. ನಿನ್ನ ಪ್ರತಿಯೊಂದು ನೋಟವು ನವ ಸಾಲಾಗುತಿತ್ತು ಹೃದಯದ ತಾಳದಲ್ಲೇ ಪದ್ಯ ರೂಪಗೊಳ್ಳುತಿತ್ತು. ನಿನ್ನ ಕಾಣದ ಕ್ಷಣಗಳು ಭಾವವಾಗಿ ಹರಿದವು ಮೌನದ ಮಾತುಗಳು ಕವನದ ಸಲಾಗಿ ಬೆರೆತವು. ಕವಿತೆ ಬರಿಯೋಕೆ ಶಬ್ದ ಬೇಕಿಲ್ಲವಂತೆ ಕೇವಲ ನಿನ್ನ ನೆನಪೊಂದೇ ಸಾಕು ಅದು ಸಾಲಾಗಿ ಹರಿಯತ್ತದೆ. ಈ ಶೀರ್ಷಿಕೆ ಇಲ್ಲದ ಕವಿತೆಗೆ ನೀನೇ ಕಾರಣ ,ನೀನೆ ಆದಿ , ನೀನೆ ಅಂತ್ಯ.
----------------------------------
Reg ID: BF25-5140
Please Note - You can vote only Once. If you have already voted - the voting will be disabled automatically by the system.