Submission 970

ಮಳೆ

ರಚನೆ : ಡಾ.ನಾಗಭೂಷಣ

----------------------------------

ಇಳೆಯನಪ್ಪುಗೆ ಮಾಡು ವರ್ಷಧಾರೆ ರಮಿಸಲು ಕಾಯುತಿದೆ ಬಸವಳಿದ ಧರೆ ಗರ್ಭದರಿಸಿದ ಭೂತಾಯಿಗೆ ನಡೆಯಬೇಕಿದೆ ವನಸಿರಿಯ ಸೀಮಂತ ರೈತನಿಗೂ ಬಿತ್ತಿ ಬೆಳೆಯುವ ಧಾವಂತ ಪಶು ಪಕ್ಷಿ ಮನುಕುಲಕೆ ನಿನ್ನದೇ ಜಪ ತಾಳಲಾರರು ನಿನ್ನ ಮುನಿಸಿನ ತಾಪ ನೀ ಸುರಿದು ಭೋರ್ಗರೆದು ತಂಪೆರೆಯಬೇಕು ಹಸಿರ ಸಿರಿ ಭೂತಾಯ ಮೈದುಂಬಬೇಕು ತಿಳಿನೀಲ ನಭ ನೀನೊಮ್ಮೆ ಗರ್ಭ ಧರಿಸು ಕಾರ್ಮೊಡದ ಜೊತೆ ಒಮ್ಮೆ ಸಂಭ್ರಮದಿ ಸೆಣಸು ಮೋಡಕೂ ಒಮ್ಮೆ ಪ್ರಸವ ವೇದನೆ ಬರಲಿ! ಕಷ್ಟವಾದರು ಸರಿ ತಂಪನೀಯುವ ಜೀವಜಲವನು ಹಡೆಯಲಿ!!

----------------------------------

ನೋಂದಣಿ ಐಡಿ : KPF-S1-5459

0
Votes
160
Views
1 Year
Since posted

Finished since 450 days, 10 hours and 54 minutes.

Scroll to Top