Submission 932

ನನ್ನಪ್ಪ

ರಚನೆ : ಶಂಕರಿ

----------------------------------

ನಾ ಭೂಮಿಗೆ ಬರುವ ಮೊದಲೆ ಎಲ್ಲರಿಗಿಂತಲೂ ಆನಂದ ಪಟ್ಟವನು ನನ್ನಪ್ಪ.... ನಾ ಸಂತೋಷ ದಿಂದಿರ ಬೇಕೆಂದು ತನ್ನ ಕಷ್ಟ, ನೋವು ಮರೆತು ಪ್ರೀತಿ, ಖುಷಿ ಎಲ್ಲವನ್ನು ತನಗಾಗಿ ಧಾರೆಯೆರೆದ ದೇವರು ನನ್ನಪ್ಪ... ನಾ ತಾಯಿಯ ಗರ್ಭ ಎಂಬ ಒಂದು ಪುಟ್ಟ ಸ್ವರ್ಗ ದಿಂದ ಹೊರ ಬಂದಾಗ ನನ್ನನ್ನ ಅಪ್ಪಿ ಮುತ್ತನ್ನಿಟ್ಟು ಅಕ್ಕರೆಯಿಂದ ಸ್ವಾಗತಿಸಿದವನು ನನ್ನಪ್ಪ... ನನಗೆ ನೆಮ್ಮದಿಯ ನಿದ್ದೆ ಬರಲೆಂದು ತನ್ನ ಎದೆಯನ್ನೇ ಹಾಸಿಗೆ ಮಾಡಿದವನು ನನ್ನಪ್ಪ... ನನ್ನ ಖುಷಿಯಲ್ಲೇ ತನ್ನ ಖುಷಿ ಕಾಣುತ್ತಿದ್ದ ನನಗಾಗಿಯೇ ಇದ್ದ ಪುಟ್ಟ ಜೀವ ನನ್ನಪ್ಪ....

----------------------------------

ನೋಂದಣಿ ಐಡಿ : KPF-S1-5435

0
Votes
150
Views
1 Year
Since posted

Finished since 498 days, 19 hours and 40 minutes.

Scroll to Top