Submission 828

ನನ್ನ ಅವ್ವ

ರಚನೆ : ಬಿಂದು ಆರ್‌ ಡಿ ರಾಂಪುರ

----------------------------------

ಬಡತನದ ದಾರಿ ದಾಟಿ ಬೆಳಕಾಗಿದ್ದಳೆ, ಮಕ್ಕಳ ಕಲಿಕೆಗಾಗಿ ಕಷ್ಟ ತಟ್ಟಿದ್ದಾಳೆ. ಅವಮಾನ, ಅವಹೇಳನ ಆಕೆಗಂತು ಹೊಸತೇನು? ನ್ಯಾಯ ಪಥವಳೆದು ನಡೆದು ಬೆಸೆದಳು ಪಥವನು! ಗಂಡನಿಗೆ ತಾಯಿ, ಮಕ್ಕಳಿಗೆ ಧ್ರುವತಾರೆ, ನಂಬಿಕೆಯ ಬೆಳಕಾಗಿ ಮಿಡಿದಳು ತಾಯಿ ಮನೆ. ಮಾನಗೆಟ್ಟ ಊರೊಳಗೆ ಅವಳ ಪ್ರಾಮಾಣಿಕ ನಡತೆ, ಸತ್ಯಪಥದಲ್ಲಿ ಹಾದು ಬಾಳಿದಳು ಭಯವಿಲ್ಲದೆ. ಬಡತನದ ಸುತ್ತ ಮುತ್ತ ಕತ್ತಲು ಹಬ್ಬಿದರೂ, ಸಂಚು ಹೊಂಚುಗಳನೆಲ್ಲಾ ಮೆಟ್ಟಿ ನಿಂತ ಮನಸು ಅವರದ್ದು. ನಡೆದ ದಾರಿಯಲ್ಲಿಯೇ ಬೆಳಕಾಗಿ ನೆಲಸಿ, ಅವಳ ಬದುಕು ನಮ್ಮೆಲ್ಲರಿಗೊಂದು ಪಾಠವಾಯಿತು! ಅವಳ ಋಣ ತೀರಿಸಲು ಸಾಧ್ಯೆವೇ ? ನಾನೇನು ಮಾಡಿದರೂ ಕಡಿಮೆಯೇ! ನಮಗಾಗಿ ಅವಳು ಅವಳಿಗಾಗಿ ನನ್ನ ಅವ್ವ.

----------------------------------

ನೋಂದಣಿ ಐಡಿ : KPF-S1-5375

0
Votes
138
Views
1 Year
Since posted

Finished since 490 days, 18 hours and 31 minutes.

Scroll to Top