Submission 824

ಪ್ರೇಮ ಚುಕ್ಕಿ

ರಚನೆ : ನಾಗರಾಜ್ ಸಿ ಚೊಕ್ಕೋಡ್

----------------------------------

ಈ ಮೊದಲ ಆಲಿಂಗನದಲಿ ಹೃದಯ ಹೃದಯ ತಬ್ಬಿವೆ, ಒಲವ ಬಳ್ಳಿ ಹಬ್ಬಿದೆ. ಹರುಷ ಉಕ್ಕಿ, ಪ್ರೇಮ ಚುಕ್ಕಿ ಆಗಸಕೆ ನೆಗೆದಿದೆ. ಬಾನಲೀಗ ಪ್ರೇಮ ಚುಕ್ಕಿ ಮಿರ ಮಿರ ಮಿರ ಮಿಂಚಿದೆ ಒಲವ ಹೊಳಪ ಮಿನುಗಿದೆ. ಬಾನಗೀಗ ಹೊಸ ಮೆರಗು, ನೋಡೋ ಮನಕೆ ಅದು ಬೆರಗು, ಅಲ್ಲಿ ನಮ್ಮೊಲವ ಗುರುತಿದೆ. ಆಗುರುತು, ಹೆಗ್ಗುರುತು. ಒಡಲಾಳದ ಪ್ರೇಮದೊನಪು ತಾರೆಯಾದ ಸವಿ ನೆನಪು.

----------------------------------

ನೋಂದಣಿ ಐಡಿ : KPF-S1-5373

0
Votes
168
Views
1 Year
Since posted

Finished since 507 days, 22 hours and 40 minutes.

Scroll to Top