Submission 539

ಆಕೆ ಶಾಪಗ್ರಸ್ತೆ

ರಚನೆ : ವಿಶ್ವಾಸ್ ಆರ್

----------------------------------

ಸ್ತಬ್ಧವಾದಳು ನಗುವುದನು ಮರೆತು ಅರಸಿ ಬಂದವರು ನಶಿಸಿಹೋದರು ಮೌನಿಯಾಗಿಹಳು ಜಗವ ತೊರೆದು ಲೋಕದ ಪರಿವೇ ಇಲ್ಲದೆ ಚಿಂತನೆಯಲಿ ಮಗ್ನಳಾಗಿ, ಕುಳಿತಿಹಳು ಶೂನ್ಯಚಿತ್ತದಿ ನಗ್ನಳಾಗಿ, ಕೊನೆಗೆ ಭಗ್ನಳಾಗಿ ಬಯಸಿದ್ದು ಸಿಗಲಿಲ್ಲ ಇಂದಿಗೂ ಸಿಕ್ಕಿದ್ದು ಉಳಿಯದು ಎಂದಿಗೂ ಅಮರಳಾಗಿಯೂ ನಿರ್ಜೀವಿ, ಆಕೆ ಶಾಪಗ್ರಸ್ತೆ.

----------------------------------

ನೋಂದಣಿ ಐಡಿ : KPF-S1-5125

0
Votes
130
Views
1 Year
Since posted

Finished since 379 days, 0 hours and 14 minutes.

Scroll to Top