Submission 519

ಅಪ್ಪ

ರಚನೆ : ಪ್ರವೀಣಕುಮಾರ ಹೊನ್ನಪ್ಪನವರ

----------------------------------

ತಂಪಾದ ಕಂಪಿನಲಿ ಬಳ್ಳಿಯಾಗಿ ಬಾಹುಗಳನ್ನು ಪಸರಿಸಿ, ಹೂ ಬಿಟ್ಟು ಹಾಯಾಗಿ ತೇಲುತಿದ್ದೆ ಅಪ್ಪನೆಂಬ ಆಲದ ಮರದ ನೆರಳಿನಲ್ಲಿ!! ಗೆದ್ದಿಲು ಹುಳು ಸೇರಿಕೊಂಡು ಬೇರಿನಲ್ಲಿ ಆಲದ ಮರ ಅಲ್ಲಾಡಲು, ಬುಡದ ಹಿಡಿತ ಕೈ ತಪ್ಪಲು ಶುರುವಾಯಿತು!! ಆದರೂ ಬಳ್ಳಿಗೆ ಅದರ ಪರಿವೆ ಇಲ್ಲಾ ಭೂಮಿಗೆ ಬಿದ್ದ ವಿಶಾಲವಾದ ನೆರಳು ತನ್ನದೇ ಎಂಬ ಹುಂಬುತನ!! ವಿಧಿಯ ಆಟಕೆ ಸೋತು ಆಲದ ಮರ ಶರಣಾಯಿತು ಬಳ್ಳಿಯು ತನ್ನ ಭಾರವೇ ತಾನು ಹೊರದಾಯಿತು ಕೈಮುಗಿದು ಹೇಳಲು ಧನ್ಯವಾದ ಉಳಿದಿರುವದು ಕೇವಲ ಗೆದ್ದಿಲು ಹುಳು ಬಿಟ್ಟ ಮಣ್ಣು ಮಾತ್ರ

----------------------------------

ನೋಂದಣಿ ಐಡಿ : KPF-S1-5090

0
Votes
152
Views
1 Year
Since posted

Finished since 495 days, 12 hours and 25 minutes.

Scroll to Top