Submission 493

ಸಮಾನತೆಯ ಹಸಿವು

ರಚನೆ : ಸಂದೀಪ್ ಎಂ ಪಿ

----------------------------------

12 ನೇ ಶತಮಾನದ ಮಧ್ಯಭಾಗದಲ್ಲಿ ಈ ಭೂಮಿಗೆ ಬಂದ ಶಿವನ ಮಾನಸ ಪುತ್ರ ದಾಸಿಮಯ್ಯ ನೇಯ್ದ ವಸ್ತ್ರದಲ್ಲಿ “ಇಷ್ಟಲಿಂಗ”ವ ಕಟ್ಟಿ ಮಾಚಯ್ಯ ಶುಚಿಗೋಳಿಸಿದ “ಶ್ವೇತ” ವಸ್ತ್ರ ತೊಟ್ಟು ಹರಳಯ್ಯನು ಕೊಟ್ಟ “ಮೇಲ್ವರ್ಗ” ಎಂಬ ಪಾದುಕೆ ಮೆಟ್ಟಿ ಅಹಂಕಾರದುದ್ದೆಯೆಂಬ ಕುದುರೆಗೆ “ಸರಳತೆ”ಯೆಂಬ ಲಗಾಮು ಹಾಕಿ ಚೌಡಯ್ಯನ ದೋಣಿಯಲ್ಲಿ “ಆಸೆ” ಎಂಬ ನದಿ ದಾಟಿ ಮುದ್ದಯ್ಯನ ಮನೆಯ “ಜಾತಿ”ಯಿಲ್ಲದ ಅಕ್ಕಿಯ ತಂದು ಆತ್ಮಗೌರವ ಎಂಬ ಜ್ಞಾನದ ಬಾವಿಯಿಂದ “ವಚನ”ವೆಂಬ ನೀರ ತಂದು ಗುಂಡಯ್ಯನ ಮನೆಯ “ನಾವು” ಎಂಬ ಮಡಿಕೆ ತಂದು ಉತ್ತಮರ ದಾಸಿಯಾಗಿದ್ದ ಸಂಕಮ್ಮನಿಂದ “ಸಮಾನತೆ” ಎಂಬ ಅನ್ನ ಬೇಯಿಸಿಸಿ ಸರ್ವರಿಗೂ ಸಮಾನತೆಯ ಅನ್ನ ಉಣಬಡಿಸಿದೆ ಇಂದು ಆ ಸಮಾನತೆಯ ಅನ್ನ ಅಳಿಸಿದೆ ಮತ್ತೋಮೆ ಬಾರೋ ಅಣ್ಣಾ ಜಾತಿಯ ಸೌಧ ಕೆಡವಿ ಸಮಾನತೆಯ ಸೌಧ ಕಟ್ಟಿ ಸರ್ವರಿಗೂ ಸಮಾನತೆಯ ಅನ್ನ ಉಣಬಡಿಸು."

----------------------------------

ನೋಂದಣಿ ಐಡಿ : KPF-S1-5065

0
Votes
156
Views
1 Year
Since posted

Finished since 469 days, 20 hours and 15 minutes.

Scroll to Top