ಬದುಕು
Submitted By: Javedahmad Makandar (ಜಾರಮ)
----------------------------------
ಬದುಕಿದು ಬದುಕಿದ್ದು, ಉಳಿದೆಲ್ಲಾ ಅವನದ್ದು ಹರುಷದಿ ಕಳೆಯುವುದು, ಅದು ನಿನಗೆ ಬಿಟ್ಟಿದ್ದು| ಎಲ್ಲ ಸರಿಮಾಡಲು ಬಾಳಲ್ಲ ನಿರ್ದಿಷ್ಟ ತಿದ್ದಿಕೊಳ್ಳಲಾದರೂ ಯತ್ನಿಸಬೇಕು ಕನಿಷ್ಠ ಮರಳಿ ಹೋಗಬೇಕಿದೆ ಅದು ಮಾತ್ರ ಸ್ಪಷ್ಟ ಸದಾ ಬದುಕಿರಲೇ ಬೇಕು ಇದು ಸರ್ವರಿಗೂ ಇಷ್ಟ| ಎಷ್ಟೆ ಬೆಳೆದರೂ ಪಾಠ ನಿಲ್ಲಿಸದು ಜೀವನದ ಶಾಲೆ ನಗು ಮೊಗದ ಒಳ್ಳೆ ಮಾತುಗಳು ಪೂರ್ಣಾಂಕದ ಓಲೆ ಸದ್ಗುಣ ಮನಸ್ಸಿನ ಕಾಯಕ್ಕೆ ಕಾದಿದೆ ಜಯಮಾಲೆ ಕವಿವಾಣಿಯಂತೆ "ಮೊದಲು ಮಾನವನಾಗು" ಉಳಿದಿದ್ದು ಆಮೇಲೆ|
----------------------------------
Reg ID: BF25-5859
Please Note - You can vote only Once. If you have already voted - the voting will be disabled automatically by the system.