Submission 3769

ದೇವರು ದೂರಾಗಿದ್ದಾನೆ.

Submitted By: ಸಾಗರ ಬಾಳಿಕಾಯಿ

----------------------------------

ದೇವರು ದೂರಾಗಿದ್ದಾನೆ, ಹರಿಹರರ ನೆನೆಯದ ಮನಗಳ ಕಂಡು ದೇವರು ತುಂಬಾ ದೂರಕ್ಕೆ ಸರಿದಿದ್ದಾನೆ..! ಮೂರ್ತಿಯ ಮುಂದೆ ಮೂರ್ತನಾಗದೆಯೇ, ಮನದಲ್ಲಿ ಹರಿಹರರ ನೆನೆದರದು‌ ಭಕ್ತಿಯಲ್ಲವೇ? ದೇವರ ಕಾಣಲು ಅರ್ಚಕನೆಂಬ ದಲ್ಲಾಳಿಯಿಲ್ಲದೇ, ದೇವರು ನಮಗೆ ದರ್ಶನವ ನೀಡನೇ? ದೇವರು ಸರ್ವವ್ಯಾಪಿಯಾದೊಡೆ ನಾನಲ್ಲೂ ದೇವರಿಲ್ಲವೇ? ನಿಮ್ಮಲ್ಲೂ ದೇವರಿಲ್ಲವೇ? ಹಾಗಾದರೆ ನಮ್ಮ ಆತ್ಮದ ಶುದ್ಧಿಯೇ ದೇವರ ಪೂಜಯಲ್ಲವೇ? ನಮ್ಮ ಒಳ್ಳೆಯ ಕಾರ್ಯಗಳೇ ದೇವನಿಗೆ ಅಭಿಷೇಕವಲ್ಲವೇ? ನಮ್ಮ ಒಳ್ಳೆಯ ಮಾತುಗಳೇ ಮಂತ್ರಗಳಲ್ಲವೇ? ಇಂದಿನ ಈ ದೇವರ ಹೆಸರಿನ ವ್ಯಾಪಾರ ಮುಗಿಯದೇ, ದೇವರು ಹತ್ತಿರಕ್ಕೆ ಸುಳಿಯುವುದಿರಲಿ, ಅವನ ನೋಟವು ನಮ್ಮಲ್ಲಿ ಇಳಿಯಲಾರದು..!

----------------------------------

Reg ID: BF25-5844

Please Note - You can vote only Once. If you have already voted - the voting will be disabled automatically by the system.

63
Votes
647
Views
6 Months
Since posted

VOTING Closed on Nov 30, 2025!

Scroll to Top