Submission 3751

ಆಸೆ ನನಗೆ!

Submitted By: Gangamma Shekharappa Girisagara

----------------------------------

ನೀವು ಬಿತ್ತಿದ ವಿದ್ಯೆ ಎಂಬ ಬೀಜದಿಂದ, ವಿಧೇಯಳಾಗುವ ಆಸೆ ನನಗೆ! ನಿಮ್ಮ ಮಾರ್ಗದರ್ಶನದಿಂದ ಬೆಳೆಯುವ, ಪೈರಾಗುವ ಆಸೆ ನನಗೆ! ನನ್ನ ತಪ್ಪುಗಳನ್ನು ತಿದ್ದಿ ಸರಿಪಡಿಸಿದವರು ನೀವು, ನಿಮ್ಮ ಹಾದಿಯಲ್ಲಿ ಸಾಗುವ ಆಸೆ ನನಗೆ! ನನ್ನ ಪ್ರತಿ ಹೆಜ್ಜೆಯ ಹಿಂದಿರುವ ಶಕ್ತಿ ನೀವು, ನಿಮ್ಮಂತೆ ಸ್ಪೂರ್ತಿ ಆಗುವ ಆಸೆ ನನಗೆ! ನೀವು ಕಲಿಸಿದ ಪಾಠವನ್ನು ಅರಿತು, ಧನ್ಯಳಾಗುವ ಆಸೆ ನನಗೆ! ನಿಮ್ಮ ಕೈಯಲ್ಲಿ ಕಲಿಯಬೇಕೆನ್ನುವ, ಕಲಿಕೆಯ ಆಸೆ ನನಗೆ! ನಿಮ್ಮ ನಿಷ್ಕಲ್ಮಶ ಸೇವೆಯಲ್ಲಿ ಸದಾ, ವಿಧೇಯ ವಿಧ್ಯಾರ್ಥಿನಿ ಆಗುವ ಆಸೆ ನನಗೆ! ಸದಾ ನಿಮಗೆ ಋಣಿ ಆಗುವ ಆಸೆ ನನಗೆ!

----------------------------------

Reg ID: BF25-5835

Please Note - You can vote only Once. If you have already voted - the voting will be disabled automatically by the system.

27
Votes
205
Views
10 Months
Since posted

VOTING Closed on Nov 30, 2025!

Scroll to Top