ಕಡಲಗಳ್ಳರು
Submitted By: THARUN
----------------------------------
ಲೂಟಿ ಮಾಡಲು ಬಂದರು ಲಾಟಿ ಏಟು ಕೊಟ್ಟರೋ, ಚಿಟ್ಟೆಯಂತೆ ಬಟ್ಟೆ ಧರಿಸಿ ಚಿದ್ರಿಸಲೆಂದೇ ಬಂದರೋ, ಕೋಟಿ ಕೋಟಿ ಹಣ ಕದ್ದುಬಿಟ್ಟರೋ, ದೋಚಿ ಹೊಂಟರು ಕಡಲಗಳ್ಳರು. ಒಡಲೊಳಗೆ ಬೆಂಕಿಯ ಇಟ್ಟು ಉರಿಸಿದರು, ದಬ್ಬಾಳಿಕೆಯ ಬೀಜ ಹುತ್ತುಬಿಟ್ಟರು, ತಿಳಿಯದ ಹಾಗೆ ಸುಟ್ಟು ಬೂದಿ ಮಾಡಿದರು, ದೋಚಿ ಹೊಂಟರು ಕಡಲಗಳ್ಳರು. ಹೃದಯವಂತಿಕೆ ಶ್ರೀಮಂತಿಕೆ ಹೊರಟೆ ಹೋಯಿತು ಸುಳಿಯದಂತೆ. ನೆತ್ತರ ಹರಿಸಿದರು ಕೆಂಪು ಕೋತಿಗಳು ಮನ ಕಲಕುವಂತೆ. ಹೊನ್ನು, ಮಣ್ಣು ಸಾಗಿಸಿಬಿಟ್ಟರು ಸುಳಿಯದಂತೆ. ದೋಚಿ ಹೊಂಟರು ಕಡಲಗಳ್ಳರು. ವೀರರು ರಕ್ತದ ಕೋಡಿಯಹರಿಸಿದರೋ. ಜೀವ ಬಿಟ್ಟರೂ ಹೋರಾಟದ ಬೀಜ ನೆಟ್ಟರೋ. ರಾತ್ರೋರಾತ್ರಿ ಕಳ್ಳರಂತೆ ಹೊಂಟುಬಿಟ್ಟರೋ, ನಾಚಿಕೆ ಇಲ್ಲದ ಕಡಲಗಳ್ಳರು.
----------------------------------
Reg ID: BF25-5827
Please Note - You can vote only Once. If you have already voted - the voting will be disabled automatically by the system.