ಸಮಾನತೆ
Submitted By: Rudragouda Sanakal
----------------------------------
ಅಣ್ಣಾ ಬಾರೋ ಬಸವಣ್ಣ ಈ ಮತಿಗೇಡಿ ಜನರ ನೋಡಣ್ಣ ಧರ್ಮ-ಧರ್ಮದಾ ನಡುವೆ ಬೆಂಕಿನ ಹಚ್ಚಾರೊ ನಾ ಮೇಲು ನೀ ಮೇಲು ಅನ್ನುವ ಹುಚ್ಚರೂ ಜ್ಯಾತಿ ಗೀತಿ ಅಂತ ಬಡಿದಾಡಿಕೊಂಡಾರು ಕೂಡಿಬಾಳಿದರ "ಕೈಲಾಸ" ಅನ್ನುವದ ಮರೆತಾರು ಲೂಟಿ ಮಾಡುತಿಹರು ಕೋಟಿ ಕೋಟಿ ಬಡವರ ಮಕ್ಕಳು ಹಿಡಿಯುದೆಂಗ ಪಾಠಿ-ಗೀಟಿ ಗಂಡು ಮೇಲಂತ, ಹೆಣ್ಣು ಕೀಳಂಥ ಸಮನಾಗಿ ಬಾಳುವ ಬದುಕೇ ಬೇಡಂಥ ಆಕಾಶ-ಭೂಮಿ ಎರಡೇ ಶಾಶ್ವತ ಇಲ್ಲಿ ನಾನು ನೀವು ನೀರಿನ ಮೇಲಿನ ಗುಳ್ಳಿ ಮತ್ತೆ ಬಾ ಬಸವಣ್ಣಾ ಈ ಮನುಕುಲವ ಉಳಿಸಣ್ಣ
----------------------------------
Reg ID: BF25-5816
Please Note - You can vote only Once. If you have already voted - the voting will be disabled automatically by the system.