Submission 3658

ಗಿರಿ ಮರೆಯಲ್ಲಿ ರವಿ

Submitted By: Shivukumar B Koppur

----------------------------------

ರವಿ ಬರಲು ಒಪ್ಪುತ್ತಿಲ್ಲ ಯಾಕೋ ಮುನಿಸಿಕೊಂಡಿಹನಲ್ಲ ಕಾರಣ ಇಷ್ಟೆ ..... ಜಗ ಬದಲಾಗಿದೆಯಲ್ಲ ಗಿರಿ ಮರೆಯಲ್ಲಿ ರವಿ ಇಣುಕಿನೊಡುತ್ತಿದ್ದಾನೆ. ಲಂಚದವತಾರ ಕಂಡಿಹನಲ್ಲ ನಭಕ್ಕೆ ಬರಲು ಮನಸ್ಸಿಲ್ಲ ಕಾರಣ ಇಷ್ಟೆ .... ನಾಚಿಕೆಯಾಗುತ್ತಿದೆಯಲ್ಲ ಗಿರಿ ಮರೆಯಲ್ಲಿ ರವಿ ಇಣುಕಿನೊಡುತ್ತಿದ್ದಾನೆ. ಮನುಷ್ಯ ದುರಾಸೆಗಾಗಿ ಪರಿಸರ ಕೆಡಿಸಿದ್ದಾನಲ್ಲ ಕಂಡು ಕಾನನ ಕರಗಿದ್ದಾನಲ್ಲ ಕಾರಣ ಇಷ್ಟೆ ....... ಜನಕೆ ಬಿಸಿಲ ಶಕೆ ನೀಡಲು ಇಷ್ಟವಿಲ್ಲ ಗಿರಿ ಮರೆಯಲ್ಲಿ ರವಿ ಇಣುಕಿನೊಡುತ್ತಿದ್ದಾನೆ. ಬಡವರ ಗೋಳು ನೋಡಿದ್ದಾನಲ್ಲ ನೋಡಿ ಮನ ಮಿಡಿದಿದೆಯಲ್ಲ ಕಾರಣ ಇಷ್ಟೆ ...... ಬಡವರು ಬಡವರಾಗಿಯೇ ಉಳಿದಿದ್ದಾರಲ್ಲಾ . ಗಿರಿಮರೆಯಲ್ಲಿ ರವಿ ಇಣುಕಿನೋಡುತ್ತಿದ್ದಾನೆ.

----------------------------------

Reg ID: BF25-5807

Please Note - You can vote only Once. If you have already voted - the voting will be disabled automatically by the system.

0
Votes
156
Views
10 Months
Since posted

VOTING Closed on Nov 30, 2025!

Scroll to Top