Submission 3608

ಅವ್ವ ಇವಳು

Submitted By: SHUBHASHREE PAWAR

----------------------------------

ನನ್ನ ಅವ್ವನ ಅವ್ವ ಇವಳು!.... ಸದಾ ಹಸನ್ಮುಖಿಯಾಗಿರುವವಳು; ಕರುಳು ಬಳ್ಳಿಯ ಬೇರಿವಳು; ಮಮತೆಯ ಸುಮ ಇವಳು; ಪ್ರೀತಿಯ ಗಂಧ ಚೆಲ್ಲುವವಳು.... ಚಿಕ್ಕಂದಿನಲ್ಲಿ ಹೊತ್ತು ಆಡಿಸಿದವಳು, ಉರಿವ ಬಿಸಿಲಲ್ಲಿ ತನ್ನ ಸೆರಗನ್ನೇ ನೆರಳಾಗಿಸಿದವಳು, ಕೈತುತ್ತು ತಿನ್ನಿಸಿದ ಅನ್ನಪೂರ್ಣೇಶ್ವರಿ ಇವಳು, ಕಷ್ಟದಲ್ಲಿಯು ಇಷ್ಟಪಟ್ಟು ಸಲುಹಿದವಳು, ತಿಳಿದಷ್ಟು ಜಗತ್ತನ್ನು ಪರಿಚಯಿಸಿದವಳು, ಮಡಿಲಲ್ಲಿ ಮಲಗಿಸಿ ಲಾಲಿ ಹಾಡಿದವಳು, ಇಂದು ನಮ್ಮ ನಡುವೆ ಇರದವಳು; ಮನಸ್ಸಿನಲ್ಲಿ ಅಚ್ಚೊತ್ತಿರುವ ನೆನಪಿವಳು; ಆ ನೆನಪಲ್ಲಿ ಅಮರಳಾಗಿಹಳು; ನನ್ನ ಅವ್ವನಿಗಷ್ಟೇ ಅಲ್ಲ ನನಗೂ ಅವ್ವ ಇವಳು!....

----------------------------------

Reg ID: BF25-5788

Please Note - You can vote only Once. If you have already voted - the voting will be disabled automatically by the system.

12
Votes
202
Views
7 Months
Since posted

VOTING Closed on Nov 30, 2025!

Scroll to Top