ದೂರಾಗದಿರು ಇನ್ನು!
Submitted By: Ramesh konnur
----------------------------------
ಹತ್ತಿರ ವಿದ್ದರೂ ಕಾಣದೆ ಕುಳಿತೆ ಕಣ್ಣಳತೆ ದೂರದಿ ಸ್ಥಿರವಾಗಿ ನೆಲೆ ಊರಿದ್ದೀಯ ನನ್ನ ಈ ಮನದಲ್ಲಿ ಕೂಡಿ ಕಳೆದು ದಿನಗಳು ನೆನೆದು ಒಂದೇ ಸಮನೆ ಗಾಸಿ ಮಾಡುತ್ತಿವೆ ... ಪರಿಚಯದಲ್ಲಿ ನೀಡಿರುವ ಆ ಭರವಸೆ ಮಾತುಗಳು.. ವಿದಾಯ ಹೇಳಬಯಸುವಾಗ ಮರೆತು ಹೋಯಿತೇ.. ಕೊನೆಯ ಶುರುವೇ ... ಶುರುವಿನ್ನ!! ಕಂಡ ಕನಸುಗಳ ಮರೆಮಾಚುತ... ಮನದಲ್ಲಿ ಮೂಡಿರುವ ಭಾವನೆಗಳಿಗೆ.. ನಿನಗೆ ನೀನೆ ಸುಳ್ಳು ನುಡಿದಿರುವೆ.. ನನ್ನನ್ನು ತೊರೆಯಲು ಹುಡುಕದಿರು ನೀ ಕಾರಣವನ್ನು.. ಅನುಸರಿಸು ಅನುರಾಗ!. ಪಾಲಿಸು ಬಾ ಪ್ರೇಮ ಯೋಗ ದೂರಾಗದಿರು... ನೀ ಇನ್ನು!!
----------------------------------
Reg ID: BF25-5782
Please Note - You can vote only Once. If you have already voted - the voting will be disabled automatically by the system.