ಅವ್ವ
Submitted By: DEEPA MAHADEV CHOUGALA
----------------------------------
ಅವ್ವ ಏನೆಂದು ಹೊಗಳಲಿ ನಿನ್ನ ನಾ ನಿನ್ನ ಸ್ಮಿತವೊಂದು ನದಿಯ ಹಾದಿಯಂತೆ ನನ್ನವ್ವನ ಒಂದೊಂದು ಬೆವರಿನ ಹನಿಯಿಂದ ಭೂಮಾತೆಯು ತಣಿದಂತೆ ನನ್ನವ್ವ ಉಟ್ಟ ಹಸಿರು ಅಂಚಿನ ಸೀರೆ, ಅಚ್ಚ ಹಸಿರು ಬಳೆಗಳು ಭೂಮಾತೆಯ ಮಡಿಲು ತುಂಬಿದಂತೆ. ನನ್ನವ್ವನಿಗೆ ಗೊತ್ತಿಲ್ಲದೆ ಇರೋ ಬಾಹ್ಮೀ ಮುಹೂರ್ತ ಆದರೂ ಸೂರ್ಯನಿಗೆ ಸವಾಲೆಸೆದು ಕಾಯಕ ಮಾಡುವ ಕಾರ್ಯಕರ್ತೆ ಸಾಲು ಸಾಲು ರೊಟ್ಟಿ ಬಡಿದು, ಮಜ್ಜಿಗೆಯಿಂದ ಬೆಣ್ಣೆ ಕಡಿದು ಮನೆಮಂದಿಯ ಹೊಟ್ಟೆ ತುಂಬಿಸೋ ಸಿದ್ಧಿಧಾತ್ರಿ ಅನ್ನಪೂರ್ಣೆ ಇವಳು. ಕಣ್ಣಂಚಿನಲ್ಲಿ ಸಾವಿರಾರು ಕನಸುಗಳನ್ನು ಕಟ್ಟಿಕೊಂಡು ತನ್ನ ತುತ್ತಿನಲ್ಲಿ ಮಕ್ಕಳಿಗೊಂದು ಪಾಲು ಇಟ್ಟಕೊಂಡು ತನ್ನ ಸ್ವಂತದ ಆಸೆಗಳನ್ನು ತನ್ನಲ್ಲೇ ಬಚ್ಚಿಟ್ಟುಕೊಂಡು ನನ್ನವ್ವ ನೀನು ಒಂದು ಕ್ಷಣ ಸ್ವಾರ್ಥಿಯಾಗಿದ್ದರೆ ಏನೆಂದು ಬಣ್ಣಿಸಲಿ ಈ ನಿನ್ನ ನಿಸ್ವಾರ್ಥತೆಯ ಅವ್ವ, ನನ್ನವ್ವ, ನೀನೊಂದು ಎಲ್ಲೆ ಇರದ ಶರಧಿ.
----------------------------------
Reg ID: BF25-5748
Please Note - You can vote only Once. If you have already voted - the voting will be disabled automatically by the system.