ಶ್ರೀರಕ್ಷೆ
Submitted By: Chaitra RK
----------------------------------
ದೂರತೀರದ ಬೆಟ್ಟದಡಿಯಲಿ ಅಳುತಿದ್ದೆ ನಿಂತು ಏಕಾಂತವ ಅರಸಿದಾಗ ದುಃಖ ಉಕ್ಕುಕ್ಕಿ ಬಂತು ನಿನ್ನ ಮಾತುಗಳಿಂದಲೇ ಬಲ ಬಂದಿತು ಜೀವಕೆ ಮತ್ತೆ ಬದುಕುವ ಭರವಸೆ ಚಿಮ್ಮಿತು ಹೃದಯಕೆ ಬತ್ತಿದ ಮರುಭೂಮಿಯಲಿ ಬಂದೆ ಓಯಸಿಸ್ನಂತೆ ಅನುರಾಗ ಬಿರಿಯುತ ಜೇನೊಲವ ಸುರಿಸುವಂತೆ ಎನ್ನೆದೆಯ ಕವಾಟಲಿ ಪ್ರೀತಿ ಕಾಳಜಿಯ ಸುರಿಸುತ ಎನ್ನ ಬಾಳಿಗೆ ಶ್ರೀರಕ್ಷೆಯಾಗಿಹೆ ಕೈಹಿಡಿದು ಬರುತ
----------------------------------
Reg ID: BF25-5637
Please Note - You can vote only Once. If you have already voted - the voting will be disabled automatically by the system.