Submission 3226

ಪುಟ್ಟ ಹಕ್ಕಿ ಹಾರಿತು

Submitted By: Jyothi

----------------------------------

ಪುಟ್ಟ ಹಕ್ಕಿಯೊಂದು ಹಾರಲು ಯತ್ನಿಸಿತು ಎದ್ದಿತು ಬಿದ್ದಿತು ಎದ್ದಿತು ಬಿದ್ದತು ಕೊಡವಿತು ಮೈ ಕೆಡವಿತು ಪುಕ್ಕ ತಿರುಗಿಸಿ ಕತ್ತು ಕೆದರಿತು ಮಣ್ಣು ಶಿರಬಾಗಿ ನೋಡಿತು ಭೂಮಿ, ಕತ್ತೆತ್ತಿ ನೋಡಿತು ಆಕಾಶ ಮಾಡಿತು ಸಂಕಲ್ಪ ಹಾರುವುದು ನನ್ನ ಹಕ್ಕು ಓಡಿತು ಓಡಿತು ಓಡಿ ಚಾಚಿತು ರೆಕ್ಕೆ ಬಡಿಯಿತು ಬಡಿಯಿತು ರೆಕ್ಕೆಗಳ ಬಾನಂಗಳದಲಿ ಹಾರಿತು ಹಾರಿತು ಹಾರಿ ಗಗನವ ಸೇರಿತು ಪುಟ್ಟ ಹಕ್ಕಿ

----------------------------------

Reg ID: BF25-5623

Please Note - You can vote only Once. If you have already voted - the voting will be disabled automatically by the system.

2
Votes
119
Views
8 Months
Since posted

VOTING Closed on Nov 30, 2025!

Scroll to Top