Submission 3200

ಭೀಮಗಡ

Submitted By: Vijay pujar

----------------------------------

ಓ ನೋಡದೋ ಕಂಗೊಳಿಸುತಿದೆ ಕಾನನದ ತವನಿಧಿಯು ಹಚ್ಚ ಹಸಿರಿನ ಗಿಡದ ಮೇಲೆ ಕುಹೂ ಎಂದಿದೆ ಕೋಗಿಲೆಯು ೧ ಪ್ರಸನ್ನತೆಯ ಧ್ಯಾನ ಮೌನವೇ ತರುಲತೆಗಳಲಿ ಅರಳಿ ನಿಂತಿದೆ ಪ್ರೀತಿ ತುಂಬಿದ ವಧುವಿನದೆಯಿಂ ದೊಗೆವ ನಲ್ನುಡಿಯಂತಿದೆ ೨ ಎಷ್ಟು ಕಣಿವೆ ಕಂದಕಗಳು ಈ ಅರಣ್ಯದ ಒಡಲೊಳು ಏನು ತಂಪಿನ ಇಂಬು ಇದರದು ವರ್ಣಿಸುವರೆ ಮಾತಿನೊಳು ೩ ಹರಿವ ಮನವನು ನಿಲಿಸಿ ತನ್ನಡೆ ಸೆಳೆದುಕೊಳ್ಳುವ ಕಾಡಿದು ಸಕಲ ಜೀವ ವನ್ಯ ಕುಲಕೆ ಉಸಿರಾಗಿರುವ ಕಾನನವಿದು ೪ ಕಾಡಿನ ಗಾಳಿ ತಾಗಿದ್ದಷ್ಟೇ ಗೊತ್ತು ಮನದ ಮರೆವೆಗೆ ಒಂದೇ ನೆಗೆತ ಭೀಮಗಡದ ಹೆಪ್ಪುಗಟ್ಟಿದ ನಿಶ್ಯಬ್ದಕೆ ಮನವು ಧ್ಯಾನ ಮೌನಕೆ ಜಿಗಿತ.೫

----------------------------------

Reg ID: BF25-5610

Please Note - You can vote only Once. If you have already voted - the voting will be disabled automatically by the system.

1
Votes
124
Views
11 Months
Since posted

VOTING Closed on Nov 30, 2025!

Scroll to Top