ಕನ್ನಡ
Submitted By: Naveen Bhaskar S
----------------------------------
ಕಾದಂಬರಾಳ್ವಿಕೆಯ ನಿದರ್ಶನ, ಕಾಕುಸ್ಥವರ್ಮನ ಆಜ್ಞಾಪನ, ಉದಯಿಸಿತು ಹಲ್ಮಿಡಿ ಶಾಸನ, ಕನ್ನಡ ಭಾಷೆಯ ಜನನ. ಚಾಲುಕ್ಯ-ಹೊಯ್ಸಳ-ಸೇವುಣ, ಅಂದಿನ ಕನ್ನಡ ರಾಜಮನೆತನ, ಆಡಳಿತ ಭಾಷೆಯಾಗಿ ಸ್ಥಾಪನ, ಇಂದಿಗೂ ಬೇರೂರಿದೆ ಸ್ಥಾನಮಾನ. ಕಾವೇರಿ-ಗೋದಾವರಿಯರ ಉಲ್ಲೇಖನ, ಪ್ರಥಮ ಸಾಹಿತ್ಯದ ದರ್ಶನ, ಕವಿರಾಜಾಮಾರ್ಗ ಶ್ರೀವಿಜಯನ, ನಿರೂಪಿಸಿದೆ ಭಾಷೆಯ ಪುರಾತನ. ಮಹಾಕಾವ್ಯದ ಅರ್ಜುನ-ಅರಿಕೇಸರಿಯ ಸಮೀಕರಣ, ವಿಜಯಿಸಿದ ವಿಕ್ರಮಾರ್ಜುನ, ಪಂಪನ ಮಹಾನ್ ಕಥನ. ಭುವನೈಕ್ಯರಾಮನೆಂಬ ಕೃಷ್ಣ, ಅಭ್ಯುದಯಿಸಿದ ಕವಿ ಪೊನ್ನ, ಭೀಮ ಸತ್ಯಾಶ್ರಯರ ಮಂಥನ, ರನ್ನನ ಗಧಾಯುದ್ಧ ಅಸಾಧಾರಣ. ಗದ್ಯ-ಪದ್ಯ-ಕಾವ್ಯಗಳ ಮಿಶ್ರಣ, ಪುರಾಣ ಇತಿಹಾಸಗಳ ವಿಲೀನ, ಕಳೆದುಹೋದರು ಶತ ಶತಮಾನ, ಮರೆಯದಿರಿ ಈ ರತ್ನತ್ರಯರನ್ನ. 'ಅನುಭವ ಮಂಟಪ' ದ ಚಿಂತನ, ಜಗ ಮೆಚ್ಚಿದ ಬಸವೇಶ್ವರರ ವಚನ, ಅಚ್ಚ ಕನ್ನಡದ ಕಥೆಗೆ ಪ್ರೇರಣ, "ಕಬ್ಬಿಗರ ಕಾವ್ಯ"ದ ಅವಲೋಕನ. ರಾಷ್ಟ್ರಕವಿ ಕರ್ನಾಟಕ ರತ್ನ, ಬೇಂದ್ರೆ-ಕಾರಂತ-ಮಾಸ್ತಿಯರಿಗೆ ನಮನ, ಸಮಗ್ರ ಸಾಹಿತ್ಯದ ಅಧ್ಯಯನ, ಎಂಟು ಜ್ಞಾನಪೀಠ ಕನ್ನಡದ ಪ್ರಧಾನ. ಸರಸ್ವತಿ ಪುತ್ರನ "ಯಾನ", ಒಂದೊಮ್ಮೆ ಓದಿರಿ "ಆವರಣ", ಎಲ್ಲ ಭಾಷೆಗಳನ್ನೂ ಗೌರವಿಸೋಣ, ಎಂದಿಗೂ ಕನ್ನಡಿಗರಾಗೇ ಬದುಕೋಣ.
----------------------------------
Reg ID: BF25-5602
Please Note - You can vote only Once. If you have already voted - the voting will be disabled automatically by the system.