ಜ್ಞಾನ ಸುಧೆ:
Submitted By: Sunita Sollapure
----------------------------------
ಹೊತ್ತಿಗೆಯು ಕೈಯಲ್ಲಿ ಇರುವಾಗ ಸಂತಸವು| ಮುತ್ತುಗಳ ತೆರದಲ್ಲಿ ಅಕ್ಕರಗಳು| ಹೊತ್ತಿನಾ ಅರಿವಿರದೆ ಓದುಗರ ಗಮನದಲಿ| ಚಿತ್ತಕ್ಕೆ ಶುದ್ಧಿಯದು "ರುದ್ರೇಶ್ವರ"||೧|| ಪುಸ್ತಕದ ಬರಹಗಳು ಜ್ಞಾನವನು ಹೆಚ್ಚಿಸುತ| ಮಸ್ತಕದ ಬೆಳವಣಿಗೆ ಮಾಡುತ್ತವೆ| ಶಿಸ್ತನ್ನು ಬಿಂಬಿಸುತ ಜೀವನದ ಸಫಲತೆಗೆ| ಹಸ್ತದಲಿ ಸುಂದರವು"ರುದ್ರೇಶ್ವರ"||೨|| ವಿಧವಿಧದ ಬರವಣಿಗೆ ಪುಸ್ತಕವು ಪರಿಚಯಿಸಿ| ಮಧುರತೆಯ ಸಂಬಂಧ ಗಟ್ಟಿಗೊಳಿಸಿ| ಅಧರಗಳ ಚಲನದಿಂ ವಾಚನವು ಸುಲಭವದು| ಮಧುವನ್ನು ಸವಿದಂತೆ "ರುದ್ರೇಶ್ವರ"||೩||
----------------------------------
Reg ID: BF25-5568
Please Note - You can vote only Once. If you have already voted - the voting will be disabled automatically by the system.