Submission 3024

ನೆನಪುಗಳು

Submitted By: PRASANNAKUMAR K

----------------------------------

ನೆನಪುಗಳೇ ಹಾಗೆ ಸುಮ್ನೆ ಹಿಂದೆಪಟ್ಟಿದ್ದು - ಇಷ್ಟದ್ದು ಜ್ಞಾಪಿಸಿ ಪೊಣಸಿ ಕೊರಳಿಗೆ ಹೂಮಾಲೆ ಹಾಕಿಬಿಡುತ್ತವೆ ಮರೆತದ್ದನ್ನು ಮರುಕಳಿಸಿ ಪರಿಮಳದಿ ಕಂಪಿಸಿ ಆರ್ತನಾದದಿ ನರ್ತಿಸುತ್ತೆ ಸದಾ ಶರಾಬಿನಲ್ಲಿರುವ ನಶೆಯ ಗಮಲಿನಲ್ಲಿ ತೇಲಿ ಸುತ್ತ ಕಲ್ಪನೆಯನ್ನು - ಕನಸಾಗಿಸುತ್ತಾ ನನಸಾಗದ್ದನ್ನು ನೆನೆಸುತ್ತ ನೊಂದ ಕಾಯಕ್ಕೆ ಸಾಂತ್ವನದ ನೆಂದ ವಸ್ತ್ರ ತೊಡಿಸಿ ತಂಪಿಡುತ್ತವೆ ಅಚ್ಚರಿಯ ಎಚ್ಚರಿಸಿ ಮಾಯೆಯ ಮಳೆಯಂತೆ ಆವಿಯ ಇಬ್ಬನಿಯಂತೆ ಮಿಂಚಿ ಮರೆಯಾಗುವ ಭಾವನೆಗಳ ಬಣ್ಣ ಬಲವಿಲ್ಲದ ಒಲವಿನ ನಿಶಾರ್ರಾತ್ರಿಯ ಭಾವ ತೀರದ ಯಾನ ಈ ನೆನಪು

----------------------------------

Reg ID: BF25-5534

Please Note - You can vote only Once. If you have already voted - the voting will be disabled automatically by the system.

4
Votes
127
Views
8 Months
Since posted

VOTING Closed on Nov 30, 2025!

Scroll to Top