Submission 2980

ಸೌಂದರ್ಯ ಶರಧಿ

Submitted By: VIJAYKUMAR LYAVI

----------------------------------

ವ್ಯಾಕರಣ ಸೃಷ್ಟಿಸಿದೆ ಪದಗಳನ್ನು ಸೃಜಿಸಿದೆ ವಾಕ್ಯಗಳನ್ನು ಜೋಡಿಸಿದೆ ಪುಸ್ತಕಗಳ ಸಾಮ್ರಾಜ್ಯ ಸ್ಥಾಪಿಸಿದೆ ..!! ಯಾವೊಂದು ಸರಿಹೊಂದಿಲ್ಲ ಗೆಳತಿ ಶೇಕಡಾವಾರು ಒಂದರಷ್ಟು ಇಲ್ಲ ಗತಿ ಎಲ್ಲವೂ ಸೋತಿವೆ ನಿನ್ನ ರೂಪಕ್ಕೆ, ಕಣ್ ಕಾಂತಿಗೆ, ಮುಂಗುರುಳ ಸೋಕಿಗೆ, ಬ್ರಹ್ಮನೆ ಬೆರಗಾಗಿಹನು ತನ್ನ ಸೃಷ್ಠಿ ಕೈ ಚಳಕಕ್ಕೆ..! ಸಾಗರದ ಅಲೆಗೂ ಆಸೆಯುಂಟು ದಡದ ಕಚಗುಳಿ ಇಡುವ ಸ್ಪರ್ಶಕೆ ಅಲೆಯಂತೆ ಹಾತೊರೆದು ಧುಮ್ಮಿಕ್ಕಿ ನಾ ಬರುವೆ ನಿನ್ನೊಲವ ಶರಧಿಯಲಿ ಬಂಧಿಯಾಗಲು.. ಒಮ್ಮೆ ಒಲ್ಲೆನೆಂದು ಮತ್ತೊಮ್ಮೆ ತುಸು ನಾಚಿ ನಗುವೊಂದನು ಗಾಳ ಹಾಕಿ ಅಪ್ಪಬಾರದೇಕೆ..

----------------------------------

Reg ID: BF25-5514

Please Note - You can vote only Once. If you have already voted - the voting will be disabled automatically by the system.

8
Votes
167
Views
11 Months
Since posted

VOTING Closed on Nov 30, 2025!

Scroll to Top