Submission 2958

ಅನಂತ

Submitted By: Anilkumar B Baragundi

----------------------------------

ಅವಳೊಂದು ಸುಂದರ ಕವಿತೆ ಪ್ರೀತಿ ತ್ಯಾಗದಲಿ ಮೀರಿಸುವವರಿಲ್ಲ ಅವಳ ಮಮತೆ. ಚಿತ್ರಿಸಬೇಕೆಂದುಕೊಂಡೆ ಅಕ್ಷರಗಳಲ್ಲಿ ಅವಳ ಸುಂದರ ವ್ಯಕ್ತಿತ್ವವ ನಸು ನಾಚಿ ಹೇಳಿದವು ಬರೆಯುವ ಪದಗಳು ಎನಗೆ, “ನಿನ್ನ ಸುವರ್ಣೇಯ ವರ್ಣನೆ ಅಸಂಭವ.” ಪ್ರೀತಿ ಚಿಲುಮೆಯ ಸುರಿಸಿ, ಹೊಸ ಭಾಷ್ಯ ಬರೆದವಳು ಸಿಹಿ ಕನಸ ಖಜಾನೆ ಕಣಜವ ನನಗಾಗಿ ತಂದವಳು. ಅಬ್ಬಾ! ಪದಗಳೇ ನಲಿಯುತ ಕೇಳುತಿವೆ ನನ್ನನ್ನು “ಯಾರೀಕೆ ಚೆಲುವೆ? ನಿನ್ನಾಕೆ ಚೆಲುವೆ?” ಹೌದು! ಅವಳು ನನ್ನಾಕೆ ಚೆಲುವೆ ಕಡಲಾಳದೊಲವೇ ಎನ್ನ ಪುಟ್ಟ ಹೃದಯದ ಚಿಪ್ಪಿನೊಳು ಮುತ್ತಾಗಿ ಹೊಳೆವೆ ನಿನ್ನ ಅಸ್ತಿತ್ವವೇ ಅನಂತವಾಗಿರುವಾಗ ಪ್ರೀತಿ ಲಹರಿಯ ತಪಸ್ಸಿನಲ್ಲಿರುವ ಈ ಸಂತನ ಮನವು ಅರಿಯಲಾದಿತೇ ಆ ಪ್ರಚಂಡ ಅನುಭವವ ಎಷ್ಟೋ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದರೂ..... ದೊರೆಯುವ ಅತ್ಯಲ್ಪ ಕಾಲೋತ್ತರಗಳೊಂದಿಗೆ ನನ್ನೊಡನೆ ಸಹಯೋಗಿಯಾಗಿರು, ಸಂತಸದ ಸಹಧರ್ಮಿನಿಯಾಗಿರು, ಎಂದೆಂದಿಗೂ ನೀ ನನ್ನ ಮನದನ್ನೇಯಾಗಿರು.

----------------------------------

Reg ID: BF25-5505

Please Note - You can vote only Once. If you have already voted - the voting will be disabled automatically by the system.

33
Votes
361
Views
11 Months
Since posted

VOTING Closed on Nov 30, 2025!

Scroll to Top