ಗೋಮಾತೆ
Submitted By: Dr.Sangeeta B. Kolvekar
----------------------------------
ಗೋಮಾತೆಯೇ ನಿನಗೆ ನಮನ॥ ಮಾತೃದೇವತೆಯೇ ನಿನಗೆ ನಮನ॥ ಹುಲ್ಲು ತಿಂದು ಹಾಲು ಕೊಡುವ ಕಾಮಧೇನುವೇ ನಿನಗೆ ನಮನ॥ ಮಗುವಿನ ಹಸಿವನ್ನು ತಣಿಸುವ ಮಾತೃದೇವತೆಯೇ ನಿನಗೆ ನಮನ ॥ ಮೊಸರು, ಬೆಣ್ಣೆ, ತುಪ್ಪದ ಹೊಳೆಯ ಹರಿಸಿ ನಮ್ಮನ್ನು ಹರಿಸುವ ಗೋಮಾತೆಯೇ ನಿನಗೆ ನಮನ॥ ಗೋವಿಂದನ ಪ್ರಿಯ ಸಖಿ ಗೋಮಾತೆಯೇ ನಿನಗೆ ನಮನ॥ ನಿನ್ನ ಗೋಮೂತ್ರದಿಂದ ಪಾವನ ಈ ಮಾನವ ಜನ್ಮ ॥ ಗೋಮಾತೆಯೇ ನಿನಗೆ ನಮನ ಕಾಮಧೇನುವೇ ನಿನಗೆ ನಮನ॥
----------------------------------
Reg ID: BF25-5494
Please Note - You can vote only Once. If you have already voted - the voting will be disabled automatically by the system.