Submission 2930

ಕಾನನ ಕುಸುಮ

Submitted By: Geeta Balakrishna Sugate

----------------------------------

ಕಾನನದಿ ಅರಳಿತು ಕುಸುಮವೊಂದು ದುಗುಡ ಮನದಲ್ಲಿ ಹುಟ್ಟಿದೊಂದು ಪಾಡೇನು ಈಗ ನನ್ನದೆಂದು ಸುಮ್ಮನೆ ಬಾಡುವೆ ನಾ ಹೀಗೆ ಎಂದು || ಮೊಗ್ಗಾಗಿ, ಹೂವಾಗಿ , ಚೆಲುವಾಗಿ ಕಂಡು ನಿಸರ್ಗದ ಸಿರಿ ಸೊಬಗನುಂಡು ಮಸಗುವೇ ನಾ ಮುದುಡಿಕೊಂಡು ಪರಿಪರಿಯಾಗಿ ಶೋಕಿಸಿತು ನೊಂದುಕೊಂಡು || ಹೊಂಬೆಳಕ ಮೂಡಿತು ಮುಖದಲ್ಲೊಂದು ದೇಶ ಕಾಯುವ ವೀರರಾ ನೋಡಿತಿಂದು ಆಹಾ! ಜನುಮ ಸಾರ್ಥಕವಾಯಿತೆಂದು ಗಾಳಿರಭಸಕೆ ಪಾದ ಕೆಳಗೆ ತಲುಪುವೆ ನಾ ಎಂದು||

----------------------------------

Reg ID: BF25-5487

Please Note - You can vote only Once. If you have already voted - the voting will be disabled automatically by the system.

51
Votes
511
Views
8 Months
Since posted

VOTING Closed on Nov 30, 2025!

Scroll to Top