Submission 2898

ವೈಯಾರಗಿತ್ತಿ.

Submitted By: Josna Parsekar

----------------------------------

ವೈಯಾರಗಿತ್ತಿ... ಜೋಸ್ನಾ ಸಾ. ಪಾರ್ಸೇಕರ ಏನು ಚೆಂದ ಕಾಣಸ್ತಿಯೇ.... ವೈಯಾರಗಿತ್ತಿ ಏನು ಚೆಂದ ಕಾಣಸ್ತಿಯೇ.... ||ಪ|| ಹಣೆ ತುಂಬ ಕುಂಕುಮ, ಕೈ ತುಂಬ ಕೈಬಳೆ ಮಲ್ಲಿಗೆ ಮಾಲೆಯು, ಅಂದವ ಹೆಚ್ಚಿಸಲು ||೧|| ನಾಗರ ಜಡೆಯವಳೇ, ನವಿಲಿನ ನಡೆಯವಳೇ ಅಂದದಿ ತಾನೆಂದು, ಬಿಂಕವ ತೋರಿಸುತಿ ||೨|| ಚಳ ಚಳ ಕಾಸಿನ ಸರ, ಹಸಿರು ಕಡ್ಡಿಯ ಸೀರೆ ಕಾಲಿಗೆ ಕಾಲ್ಗೆಜ್ಜೆ, ನಾದವ ಮನದುಂಬಿರಲು ||೩|| ಮೊಗದಲ್ಲಿ ಕಿರುನಗೆಯು ನಗೆಯಲ್ಲಿ ನಾಚಿಕೆಯು ಕನಸಲ್ಲಿ ನೀ ಬಂದು ಅಪ್ಪುಗೆ ನೀಡಿರಲು ||೪|| ಕನಸಲ್ಲಿ ಕನಸಾಗಿ, ಮನದಲ್ಲಿ ಮನೆಮಾಡಿ ಜೀವನದ ಗುರಿಯಾಗಿ, ನೀನಿರಲು ಬದುಕಲ್ಲಿ ||೫||

----------------------------------

Reg ID: BF25-5477

Please Note - You can vote only Once. If you have already voted - the voting will be disabled automatically by the system.

49
Votes
257
Views
7 Months
Since posted

VOTING Closed on Nov 30, 2025!

Scroll to Top