ನನ್ನ ಮಹಾದೇವ
Submitted By: S Sivani
----------------------------------
ಕಷ್ಟದಲ್ಲಿ ಇರುವ ನನ್ನ ಬದುಕು, ಕಹಿತನದಲ್ಲಿ ಇರುವ ನನ್ನ ಮನಸ್ಸು, ದುಃಖದಲ್ಲಿ ಇರುವ ನಾನು, ಎಲ್ಲವೂ ನಿನ್ನ ಮಾಯೆ, ಅಲ್ವಾ ಮಹದೇವ? ನಾನು ಪೂಜೆ ಮಾಡಲ್ಲ, ನಾನು ದೇವಸ್ಥಾನಕ್ಕೆ ಹೋಗೋದು ಇಲ್ಲ, ಆದರೆ ನಿನ್ನಲ್ಲಿ ನಾನು ಇದ್ದೀನಿ, ಅಲ್ವಾ ಮಹಾದೇವ? ಯಾಕೆ ಬೇಕು ಈ ಬೇಸರದ ಬದುಕು, ಯಾಕೆ ಬೇಕು ಈ ಅವಸರದ ಜನ, ಯಾಕೆ ಬೇಕು ಈ ಅರ್ಥವಿಲ್ಲದ ಸಂಬಂಧಗಳು, ಯಾಕೆ ಮಹಾದೇವ? ನನಗೆ ಹಣ ಬೇಡ, ಐಶ್ವರ್ಯ ಬೇಡ, ಆಸ್ತಿ ಬೇಡ, ಅಂತಸ್ತು ಬೇಡ, ಆದರೆ ನೀನು ಬೇಕು ಮಹಾದೇವ.
----------------------------------
Reg ID: BF25-5447
Please Note - You can vote only Once. If you have already voted - the voting will be disabled automatically by the system.