ನೀ ನಕ್ಕರ...
Submitted By: CHIDANAND MP
----------------------------------
ನೀ ನಕ್ಕರ... ಮನದ ಮೂಗಿಲಾಗ ಗಾಳಿಪಟ ಹಾರಿದಂಗ ಸಹರಾ ಮರುಭೂಮ್ಯಾಗ ಗುಲಾಬಿ ಹೂ ಬೆಳದಂಗ ನೀ ನಕ್ಕರ... ಕನಸ್ ನನಸಾಗಿ ಹೊಸಾ ಜೀವ್ನಾ ಸಿಕ್ಕಂಗ ನೀ ನನ್ನ ಮನದಾಗ ಹಚ್ಚ-ಹಸರಾಗಿ ಉಳದಂಗ ನೀ ನಕ್ಕರ... ಬಾಡಿದ್ ಹೂವು ಮತ್ತ ಅರಳಿದಂಗ ಮಳಿ ಹನಿ ಮತ್ ಮೋಡ ಸೇರಿದಂಗ ನೀ ನಕ್ಕರ... ಮಗುಚಿದೆಲ್ಲ ಕನಸುಗಳು ಮೊಗವಾಗಿ ಬಂದಂಗ ಅಡಗಿ ಕುಂತ ನಿನ್ನ ತುಟಿಗಳು ಸಿಹಿ ಮುತ್ತ ಕೊಟ್ಟಂಗ
----------------------------------
Reg ID: BF25-5444
Please Note - You can vote only Once. If you have already voted - the voting will be disabled automatically by the system.