ಔಷಧಿ
Submitted By: Jyoti kotagi
----------------------------------
ಹಸಿವಿನಿಂದ ನರಳಿತಿರುವವರ ಉದರವ ಔಷಧಿ ತಣಿಸುವುದೇ? ಮೂಢನಂಬಿಕೆಗಳ ಬಲೆಯಿಂದ ಪಾರಾಗಲು ಔಷಧಿ ಸಿಗುವುದೇ? ಹೆಣ್ಣ ದೇಹವ ಕಿತ್ತು ತಿನ್ನುವ ನರ ರಾಕ್ಷಸರ ಮಣಿಸಲು ಔಪಧಿ ಸಿಗುವುದೇ? ನಶೆಯ ಅಮಲಿನಲಿ ಕಂದಮ್ಮಗಳನೂ ಬಿಡದ ನೀಚರನಾಶಕ್ಕೆ ಔಷಧಿ ಇರುವುದೇ? ಒಲುಮೆಯಿಂದ ಮೋಸಗೊಳಿಸುವವರ ತಿಳಿಯಲು ಔಷಧಿ ಇರುವುದೇ? ಉತ್ತಮರು ,ಅಧಮರು ಯಾರೆಂದು ಗುರುತಿಸಲು ಔಷಧಿ ಸಿಗುವುದೇ? ಎಲ್ಲದಕ್ಕೂ ಪರಿಹಾರ ಔಷಧಿ ನೀಡುವುದಾದರೆ ಹೇಗಿರುತ್ತಿತ್ತು? ಸಮಾಜದಲ್ಲಿನ ಎಲ್ಲ ಸಮಸ್ಯೆಗಳಿಗೆ ಔಷಧಿ ಸಿಗುವುದೇ ???
----------------------------------
Reg ID: BF25-5436
Please Note - You can vote only Once. If you have already voted - the voting will be disabled automatically by the system.